- Advertisement -
- Advertisement -
ವಿಟ್ಲ: ವಿಟ್ಲ ಪರಿಸರದಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಇದೀಗ ವಿಟ್ಲ ಭಾಗದಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ.
ನಿನ್ನೆ ಒಕ್ಕೆತ್ತೂರಿನ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಒಂದೇ ದಿನ ಮೂವರಲ್ಲಿ ಸೋಂಕು ಪತ್ತೆಯಾಗಿದೆ.ಕಂಬಳಬೆಟ್ಟು ನಿವಾಸಿ 62 ವರ್ಷದ ವ್ಯಕ್ತಿ, ರಾಧಾಕಟ್ಟೆ ಮಲಬಾರ್ ಗೋಲ್ಢ್ ನ ಉದ್ಯೋಗಿ 31 ವರ್ಷದ ಯುವಕ ಹಾಗೂ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಸಿಯನ್ ಆಗಿರುವ ಕಂಬಳಬೆಟ್ಟು ಅಮೈ ನಿವಾಸಿ 40 ವರ್ಷದ ವ್ಯಕ್ತಿ ಮೂವರು ಕೊರೊನಾ ಪೀಡಿತರು.ಕೆಲವು ದಿನಗಳ ಹಿಂದೆ ಕಂಬಳಬೆಟ್ಟು ಗೂಡಾಂಗಡಿ ಮಾಲೀಕನಿಗೆ ಪಾಸಿಟಿವ್ ಪತ್ತೆಯಾಗಿತ್ತು.
ಅವರ ಸಂಪರ್ಕದಿಂದ 62 ವರ್ಷದ ಮತ್ತೊಬ್ಬರಿಗೆ ಪಾಸಿಟಿವ್ ಬಂದಿದೆ. ಮಂಗಳೂರಿನ ಮಲಬಾರ್ ಗೋಲ್ಡ್ ನ ಸಿಬ್ಬಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಅವರ ಸಂಪರ್ಕದಿಂದ ವಿಟ್ಲ ಪಡ್ನೂರು ಗ್ರಾಮದ ರಾಧುಕಟ್ಟೆ ನಿವಾಸಿಗೆ ಪಾಸಿಟಿವ್ ಬಂದಿದೆ. ಲ್ಯಾಬ್ ಟೆಕ್ನಿಸಿಯನ್ ಗೆ ಇತರ ಸಿಬ್ಬಂದಿಯಿಂದ ಹರಡಿರುವ ಸಾಧ್ಯಗಳಿವೆ ಎನ್ನಲಾಗಿದೆ.
- Advertisement -