Friday, May 3, 2024
spot_imgspot_img
spot_imgspot_img

ಡೇ ಕೇರ್ ನಲ್ಲಿ ಕಂದಮ್ಮಗಳ ಹೊಡೆದಾಟ; ವಿಡಿಯೋ ವೈರಲ್‌

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಬೆಂಗಳೂರಿನ ಡೇ ಕೆರ್ ನಲ್ಲಿ ಮೂರು ವರ್ಷದ ಬಾಲಕ 2 ವರ್ಷದ ಬಾಲಕಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಿಕ್ಕಲಸಂದ್ರದ ಮಾಂಟೆಸ್ಸರಿ ಶಾಲೆಯಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಬಿಕೇರ್ ಕೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸುಬ್ರಮಣ್ಯನಗರ ಪೊಲೀಸರು ನೋಟೀಸ್ ನೀಡಿದ್ದಾರೆ. ಮತ್ತೊಂದೆಡೆ ರಾಜ್ಯ ಮಕ್ಕಳ ಹಕ್ಕುಗಳ ಅಯೋಗವು ಘಟನೆ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಕೇರ್ ಸೆಂಟರ್‌ನಲ್ಲಿ ಸಾಕಷ್ಟು ಮಕ್ಕಳಿದ್ದರು. ಕೊಠಡಿಯೊಂದರಲ್ಲಿ ಹಲ್ಲೆಗೊಳಗಾದ ಬಾಲಕಿ ಜತೆಗೆ ಬಾಲಕ ಸೇರಿ ಏಳು ಮಕ್ಕಳಿದ್ದರು. ಮಗುವೊಂದು ಶೌಚಾಲಯಕ್ಕೆ ತೆರಳಲು ಹೋಗಬೇಕಾಗಿದ್ದರಿಂದ ಸಿಬ್ಬಂದಿ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ಬಾಲಕ ಬಾಲಕಿಗೆ ಹೊಡೆದಿದ್ದ. ನಿರಂತರವಾಗಿ ಏಳು ನಿಮಿಷಗಳ ಕಾಲ ಸೆರೆ ಯಾದ ವಿಡಿಯೋದಲ್ಲಿ ಹಲವು ಬಾರಿ ಹಲ್ಲೆ ಮಾಡಿದ್ದಾನೆ. ಪೋಷಕರು ಬಾಲಕಿಯನ್ನು ಮನೆಗೆ ಕರೆದೊಯ್ಯಲು ಬಂದಾಗ ಮುಖದ ಮೇಲೆ ಕೆನ್ನೆ ಹಾಗೂ ಕೈಗಳ ಮೇಲೆ ಗಾಯದ ಗುರುತು ಇರುವುದನ್ನು ಕಂಡಿ ದ್ದಾರೆ. ಇತರ ಮಕ್ಕಳಿಂದ ಮಾಹಿತಿ ಪಡೆದಿದ್ದರು. ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು.

ಘಟನೆಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿ ತ್ತು. ಈ ಹಿನ್ನೆಲೆಯಲ್ಲಿ ಡೇ ಕೇರ್ ತಾತ್ಕಾಲಿಕ ಬಂದ್ ಮಾಡಲಾಗಿದೆ. ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಡೇ ಕೇರ್ ಗೆ ದೌಡಾಯಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಬಾಲಕಿಯ ಪೋಷಕರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!