Sunday, July 6, 2025
spot_imgspot_img
spot_imgspot_img

ಕೊವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಮುಂದಾದ ಕೇಂದ್ರ: ಬೆಂಗಳೂರು ಘಟಕಕ್ಕೆ ₹ 65 ಕೋಟಿ ಅನುದಾನ

- Advertisement -
- Advertisement -

ನವದೆಹಲಿ: ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್​​ನ ಉತ್ಪಾದನೆಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆತ್ಮನಿರ್ಭಾರ ಭಾರತ್ 3.0 ಮಿಷನ್ ಅಡಿ ಕೋವಿಡ್​ ಸುರಕ್ಷ ಯೋಜನೆಯನ್ನ ಘೋಷಿಸಿದೆ.

ಈ ಯೋಜನೆಯಡಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ, ಲಸಿಕೆ ತಯಾರಿಕಾ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಗ್ರಾಂಟ್​​​ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ಈ ಮೂಲಕ 2021ರ ಮೇ-ಜೂನ್ ವೇಳೆಗೆ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯನ್ನ ದುಪ್ಪಟ್ಟು ಮಾಡಲು ಉದ್ದೇಶಿಸಲಾಗಿದೆ.

2021 ಜುಲೈ- ಆಗಸ್ಟ್​ ವೇಳೆಗೆ ಉತ್ಪಾದನೆ ಪ್ರಮಾಣವನ್ನ 6ರಿಂದ 7 ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯ ಏಪ್ರಿಲ್ ತಿಂಗಳಲ್ಲಿ 1 ಕೋಟಿ ವ್ಯಾಕ್ಸಿನ್ ಡೋಸ್​​ಗಳನ್ನ ಉತ್ಪಾದನೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನ ಜುಲೈ-ಆಗಸ್ಟ್​​ ವೇಳೆಗೆ 6 ರಿಂದ 7 ಕೋಟಿ ಡೋಸ್​ಗಳಿಗೆ ಹೆಚ್ಚಿಸಲು ಚಿಂತಿಸಲಾಗಿದೆ.

ಸೆಪ್ಟೆಂಬರ್​ ವೇಳೆಗೆ ಲಸಿಕೆ ಉತ್ಪಾದನೆ 10 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ವಾರಗಳ ಹಿಂದೆ, ಇಂಟರ್​ ಮಿನಿಸ್ಟ್ರಿಯಲ್ ತಂಡಗಳು ಭಾರತದ 2 ಮುಖ್ಯ ಲಸಿಕೆ ತಯಾರಕ ಸಂಸ್ಥೆಗಳ ಘಟಕಗಳಿಗೆ ಭೇಟಿ ನೀಡಿ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ಸಮಾಲೋಚನೆ ನಡೆಸಿದ್ದವು. ಈ ಪ್ಲಾನ್​ನ ಭಾಗವಾಗಿ ಅಗತ್ಯ ಮೂಲಸೌಕರ್ಯ ಮತ್ತು ತಂತ್ರಜ್ಞಾನದೊಂದಿಗೆ ಹೈದರಾಬಾದ್​ನ ಭಾರತ್ ಬಯೋಟೆಕ್ ಲಿಮಿಟೆಡ್ ಮತ್ತು ಇತರ ಸಾರ್ವಜನಿಕ ವಲಯದ ಉತ್ಪಾದಕ ಸಂಸ್ಥೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಲಾಗ್ತಿದೆ.

ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ್ ಬಯೋಟೆಕ್‌ನ ಹೊಸ ಬೆಂಗಳೂರು ಘಟಕವನ್ನ ಮರುಬಳಕೆ ಮಾಡಿಕೊಳ್ಳಲಾಗ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 65 ಕೋಟಿ ರೂಪಾಯಿ ಅನುದಾನ ನೀಡ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

- Advertisement -

Related news

error: Content is protected !!