Thursday, April 18, 2024
spot_imgspot_img
spot_imgspot_img

ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಹೊಸ ಮಾರ್ಗಸೂಚಿ ಪ್ರಕಟ.!!

- Advertisement -G L Acharya panikkar
- Advertisement -

ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಬೆಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಖಾಸಗಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಹೊಸ ಮಾರ್ಗಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಹಿನ್ನಲೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ಒಳಗೊಂಡಿರುವ ಅಂಶಗಳು
ಶಾಲೆಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೆ ರಜೆ ನೀಡಬೇಕು
ಶೀತ, ಕೆಮ್ಮು, ಜ್ವರ ಇದ್ದರೆ ಕಡ್ಡಾಯವಾಗಿ ರಜೆ ನೀಡಬೇಕು
ಮಕ್ಕಳು ಜ್ವರ, ಶೀತ, ಕಡಿಮೆ ಆಗುವ ತನಕ ಶಾಲೆಗೆ ಬರುವುದು ಬೇಡ ಎಂದು ಸೂಚಿಸಿರುವ ಆರೋಗ್ಯ ಇಲಾಖೆ
ಒಂದು ವೇಳೆ ಸೋಂಕು ದೃಢಪಟ್ಟರೆ ಶಾಲಾ ಕೊಠಡಿಯನ್ನ ಸ್ಯಾನಿಟೈಸ್ ಮಾಡಬೇಕು
ಕೊರೋನಾ ಸೋಂಕು ದೃಢಪಟ್ಟಿರುವುದು ಶಾಲೆಗಳು ಮುಚ್ಚಿಡುವಂತಿಲ್ಲ
ಒಂದು ವೇಳೆ ಆ ರೀತಿ ಮಾಡಿದರೆ ಶಾಲೆ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ‌ಇಲಾಖೆ ಆಯುಕ್ತ ಡಾ. ಡಿ. ರಂದೀಪ್ ಹೇಳಿದ್ದಾರೆ.

ಕಚೇರಿಗಳು, ಶಾಲಾ- ಕಾಲೇಜು ಹಾಗು ಅಪಾರ್ಟ್ಮೆಂಟ್‌ಗಳಿಗೆ ಸುತ್ತೋಲೆ

ಅಪಾರ್ಟ್ಮೆಂಟ್‌ಗಳಲ್ಲಿ ಕೊರೊನಾ ಪಾಸಿಟಿವ್ ಆದ ಬ್ಲಾಕ್‌ಗಳನ್ನು ಕ್ಲಸ್ಟರ್ ಎಂದು ಪರಿಗಣಿಸಬೇಕು
ಸೋಂಕಿನ ಲಕ್ಷಣ ಹೊಂದಿದವರಿಗೆ RAT ಟೆಸ್ಟ್ ಮಾಡಿಸಬೇಕು
ಪಾಸಿಟಿವ್ ಬಂದ ವ್ಯಕ್ತಿಯನ್ನ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು
ಪಾಸಿಟಿವ್ ಇದ್ದವರ CT ವ್ಯಾಲ್ಯೂ 25 ಕ್ಕಿಂತ ಹೆಚ್ಚಿದ್ದರೆ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಬೇಕು
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

- Advertisement -

Related news

error: Content is protected !!