Friday, March 29, 2024
spot_imgspot_img
spot_imgspot_img

ಆರೋಗ್ಯ ಇಲಾಖೆ ಪರೀಕ್ಷಾ ಕ್ರಮದಲ್ಲಿ ಮಹತ್ವದ ತೀರ್ಮಾನ-ಕೋವಿಡ್ ರೋಗಿಗಳಿಗೆ ಟಿಬಿ ಪರೀಕ್ಷೆ ಕಡ್ಡಾಯ

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ ರೋಗಿಗಳಿಗೆ ಇನ್ಮುಂದೆ ಟಿಬಿ ಪರೀಕ್ಷೆ ಕಡ್ಡಾಯ, ಅದೇ ರೀತಿ ಟಿಬಿ ರೋಗಿಗಳಿಗೆ ಕೋವಿಡ್ ಪರೀಕ್ಷೆಯೂ ಕಡ್ಡಾಯ ಎಂದು ಆರೋಗ್ಯ ಇಲಾಖೆ ತನ್ನ ಪರೀಕ್ಷಾ ಕ್ರಮದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಅನೇಕ ಟಿಬಿ ರೋಗಿಗಳಲ್ಲಿ ಕೋವಿಡ್ ಪತ್ತೆಯಾಗಿದೆ. ಹಾಗೇ ಅನೇಕ ಕೋವಿಡ್ ಸೋಂಕಿತರಲ್ಲಿ ಟಿಬಿ ಕೂಡ ಪತ್ತೆಯಾಗಿದೆ. ಹೀಗಾಗಿ ಕೋವಿಡ್ ಜೊತೆಗೆ ಟಿಬಿ ಪರೀಕ್ಷೆಯೂ ಕಡ್ಡಾಯ. ಟಿಬಿಗೆ ಪಾಸಿಟಿವ್ ಬಂದರೆ ಅದರ ಸಂಬಂಧಿತ ಚಿಕಿತ್ಸೆ ಮುಂದುವರಿಸಲಾಗುತ್ತದೆ.

 ಕೋವಿಡ್ ಮತ್ತು ಟಿಬಿ ಎರಡೂ ಪಾಸಿಟಿವ್ ಬಂದರೆ ಎರಡಕ್ಕೂ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಸಾವಿನ ಪ್ರಮಾಣ ತಗ್ಗಿಸುವ ಜೊತೆಗೆ ಸೋಂಕಿನ ತೀವ್ರತೆಯನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಹಕಾರಿ. ಹೀಗಾಗಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದೆ.

- Advertisement -

Related news

error: Content is protected !!