Saturday, May 18, 2024
spot_imgspot_img
spot_imgspot_img

ಕೋವಿಡ್ ​ಲಸಿಕೆ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಿರಿ ಎಚ್ಚರ..!

- Advertisement -G L Acharya panikkar
- Advertisement -

ಕೊರೊನ​ ಸೋಂಕನ್ನು ನಿಯಂತ್ರಣಕ್ಕೆ ತರಲು ಎದುರಿರುವ ಒಂದೇ ಒಂದು ಪರಿಹಾರ ಮಾರ್ಗವೆಂದರೆ ಲಸಿಕೆ​(ವ್ಯಾಕ್ಸಿನೇಷನ್). ಕೊರೊನಾ ಸೋಂಕಿನ ಆರ್ಭಟ ತಣಿಸಲು ಸರ್ಕಾರ, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಳ್ಳುತ್ತಿದೆ. ಲಸಿಕೆ ಪಡೆದಿದ್ದೀರಿ ಎಂಬ ಕುರಿತಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

ಲಸಿಕೆ ಪಡೆದ ಬಳಿಕ ಇನ್ನಿತರರಿಗೆ ಸ್ಪೂರ್ತಿಯಾಗಲು, ಹೆಚ್ಚಿನ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣಪತ್ರವನ್ನು ಪೋಸ್ಟ್​ ಮಾಡಲಾಗುತ್ತಿದೆ. ಆದರೆ ಈ ಕುರಿತಂತೆ ಏನು ತೊಂದರೆ ಆಗಬಹುದು ಎಂಬುದಾಗಿ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಹಿಂದೆ ಕೆಲವು ನಟ-ನಟಿಯರು ವ್ಯಾಕ್ಸಿನೇಷನ್​ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಬಳಿಕ ಜನಸಾಮಾನ್ಯರೂ ಕೂಡಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಪೋಸ್ಟ್​ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದರು. ಪ್ರಮಾಣ ಪತ್ರದಲ್ಲಿ ಕೆಲವು ನಿರ್ಣಾಯಕ ಡೇಟಾಗಳಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಅಪಾಯ ಹೆಚ್ಚು ಎಂದು ಸರ್ಕಾರ ಸೂಚನೆ ನೀಡಿದೆ.

ಲಸಿಕೆ ಪಡೆದವರ ಹೆಸರು ಜತೆಗೆ ಕೆಲ ವಿವರಗಳನ್ನು ಲಸಿಕೆ ಪ್ರಮಾಣಪತ್ರ ಒಳಗೊಂಡಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿವರವನ್ನು ಪೋಸ್ಟ್​ ಮಾಡುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗೃಹ ಸಚಿವಾಲಯ ಟ್ವೀಟ್​ ಮೂಲಕ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದಾಗಿ ಈ ಕುರಿತಾಗಿ ಎಚ್ಚರವಹಿಸಿ ಎಂದು ಸೂಚನೆ ನೀಡಿದೆ.

ಲಸಿಕೆ ಪ್ರಮಾಣಪತ್ರದಲ್ಲಿ ಲಸಿಕೆ ಪಡೆದವರ ಹೆಸರು, ಗುರುತಿನ ಚೀಟಿಯ ಕೊನೆಯ ನಾಲ್ಕು ಸಂಖ್ಯೆ, ಅವರು ಪಡೆದ ಲಸಿಕೆಯ ಹೆಸರು, ಲಸಿಕೆ ಪಡೆದ ಸಮಯ ಮತ್ತು ವ್ಯಾಕ್ಸಿನೇಷನ್​ ಕೇಂದ್ರದ ಕುರಿತಾದ ಮಾಹಿತಿಗಳು ಇರುತ್ತವೆ. ಚೀನಾ, ಜಪಾನ್​ ಮತ್ತು ಯುರೋಪಿಯನ್​ ಯೂನಿಯನ್​ ಸೇರಿದಂತೆ ಹಲವು ದೇಶಗಳು ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಭವಿಷ್ಯದಲ್ಲಿ ಈ ಪ್ರಮಾಣಪತ್ರವು ಸಹಕಾರಿಯಾಗಿದೆ. ಯಾವುದೇ ದೇಶಗಳಿಗೆ ಪ್ರಯಾಣಿಸುವಾಗ ಕೊವಿಡ್​ ಲಸಿಕೆ ಪಡೆದ ಕುರಿತಾಗಿ ಪ್ರಮಾಣಪತ್ರವನ್ನು ತೋರಿಸುವುದು ಅನಿವಾರ್ಯವಾಗಿದೆ.

- Advertisement -

Related news

error: Content is protected !!