Tuesday, July 23, 2024
spot_imgspot_img
spot_imgspot_img

ಕೊರೋನಾ ಪೀಡಿತ ಮಗುವಿನ ಮೃತ ದೇಹದ ಅಂತ್ಯಸಂಸ್ಕಾರ ನೆರವೇರಿಸಿದ ಬಜರಂಗದಳ

- Advertisement -G L Acharya panikkar
- Advertisement -

ಮಂಗಳೂರು : ಕೊರೊನಾ ಸೋಂಕಿನಿಂದ ಮೃತಪಟ್ಟ ಮಗುವಿನ ಬಜರಂಗದಳದ ಕಾರ್ಯಕರ್ತರು ಮಂಗಳೂರಿನ‌ ಸ್ಮಶಾನವೊಂದರಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಮೃತಪಟ್ಟ ಮಗು ಎರಡು ತಿಂಗಳಿನ ಹಸುಗೂಸಾಗಿದ್ದು, ಕೋವಿಡ್-19 ಸೋಂಕಿಗೆ ತುತ್ತಾಗಿ ಬಲಿಯಾಗಿದೆ. ಪುತ್ತೂರಿನ ದಂಪತಿಗಳಿಗೆ ಸೇರಿದ ಈ ಮಗುವನ್ನ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಮಗುವಿನ ಪಾರ್ಥಿವ ಶರೀರವನ್ನ ಪಡೆದ ಬಜರಂಗದಳದ ಸದಸ್ಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿ, ನಂದಿಗುಡ್ಡೆಯ ರುದ್ರಭೂಮಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ. ಬಜರಂಗದಳ ಕಾರ್ಯಕರ್ತರ ಈ ಮಾನವೀಯ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.

- Advertisement -

Related news

error: Content is protected !!