Thursday, November 5, 2026
spot_imgspot_img
spot_imgspot_img

ಕಾರು ಢಿಕ್ಕಿಯಾಗಿ ಇಬ್ಬರು ಸಾವು ಪ್ರಕರಣ : ಕಾರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫೆ. 8ರಂದು ರಾತ್ರಿ ಘಟನೆ ಸಂಭವಿಸಿದ್ದು, ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಫೆ.9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ರಾಗಿದ್ದರು.

ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ ನಿಲ್ಲಸದೆ ಸುಳ್ಯದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದ. ಕೃತ್ಯವೆಸಗಿದ ಕಾರಿನ ಪತ್ತೆ ಕಾರ್ಯ ಆರಂಭಿಸಿದ ಸುಳ್ಯ ಪೊಲೀಸರು ಅಪಘಾತ ಎಸಗಿದ್ದು ಇಕೋ ಕಾರು ಎನ್ನುವುದನ್ನು ಪತ್ತೆ ಮಾಡಿದ್ದರು. ಇದು ಸುಳ್ಯದ ಬೀರಮಂಗಲದ ನಿವಾಸಿಯ ಕಾರೆಂದು ತಿಳಿದುಬಂದಿದೆ.ಬೀರಮಂಗಲದ ಮನೆಯ ಮುಂದೆ ನಿಂತಿದ್ದ ಇಕೋ ಕಾರನ್ನು ಪರಿಶೀಲಿಸಿದ ವೇಳೆ ಕಾರಿನ ಮುಂಭಾಗ ಜಖಂ ಆಗಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಕೋ ಕಾರು ಮಾಲಕ ಬೀರಮಂಗಲ ನಿವಾಸಿ ಆರ್‌.ಕೆ. ಭಟ್‌ ಅವರ ಮೇಲೆ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಖಂಗೊಂಡಿರುವ ಕಾರನ್ನು ಮಂಗಳೂರು ವಿಧಿ ವಿಜ್ಞಾನ, ಬೆರಳಚ್ಚು ತಂಡದವರು ಪರಿಶೀಲಿಸಿ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!