Thursday, September 3, 2026
spot_imgspot_img
spot_imgspot_img

ಮನೆಯೊಳಗೆ ವೃದ್ಧನ ಅನುಮಾನಾಸ್ಪದ ಸಾವು – ಉಪ್ಪಿನಂಗಡಿ ಪೊಲೀಸರಿಂದ ಪ್ರಕರಣ ದಾಖಲು

- Advertisement -
- Advertisement -

ಉಪ್ಪಿನಂಗಡಿ: ಮನೆಯಲ್ಲಿ ಒಬ್ಬರೇ ಇದ್ದ ವೃದ್ಧರು ರಕ್ತಗಾಯಗೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ.ದಿನಾಂಕ 08.02.2026ರಂದು ದೂರುದಾರರು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ನೆಲ್ಯಾಡಿಯ ಆಶ್ವಿನಿ ಆಸ್ಪತ್ರೆಗೆ ಕರೆದೊಯ್ದು, ರಾತ್ರಿ ಸುಮಾರು 8:00 ಗಂಟೆಗೆ ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದರು. ಆ ವೇಳೆ ಅವರ ತಂದೆ ಕೆ.ಸಿ. ವರ್ಗೀಸ್ (73) ಮನೆಯಲ್ಲಿ ಒಬ್ಬರೇ ಇದ್ದರು.ನಂತರ ರಾತ್ರಿ ಸುಮಾರು 11:00 ಗಂಟೆಗೆ ದೂರುದಾರರು ಮನೆಗೆ ಬಂದ ವೇಳೆ ಮನೆಯ ಬಾಗಿಲು ತೆರೆಯಲ್ಪಟ್ಟಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡ ಅವರು ಮನೆಯೊಳಗೆ ಹೋಗಿ ಪರಿಶೀಲಿಸಿದಾಗ, ಕೆ.ಸಿ. ವರ್ಗೀಸ್ ಅವರು ಮಂಚದ ಕೆಳಭಾಗದಲ್ಲಿ ತಲೆಗೆ ರಕ್ತಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ಈ ಕುರಿತು ಕೆ.ವಿ. ತೋಮಸ್ (40 ವರ್ಷ), ನೆಲ್ಯಾಡಿ ಗ್ರಾಮ, ಕಡಬ ತಾಲೂಕು ರವರ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 07/2026 ಪ್ರಕರಣವನ್ನು ಬಿಎನ್‌ಎಸ್‌ಎಸ್ 2023ರ ಕಲಂ 194 (III)(IV) ಅಡಿಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!