Saturday, June 6, 2026
spot_imgspot_img
spot_imgspot_img

ರೈಲಿನಲ್ಲಿ ಗಾಂಜಾ ತರಿಸಿಕೊಂಡು ಮಾರಾಟ

- Advertisement -
- Advertisement -

ಒಡಿಶಾದಿಂದ ರೈಲಿನಲ್ಲಿ ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರುತ್ತಿದ್ದ ಆರೋಪಿ ಹರ್ಷವರ್ಧನ್‌(25) ನನ್ನು ಆ‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹರ್ಷವರ್ಧನ್, ಸರಕು ಸಾಗಣೆ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ. ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಈತನಿಂದ 12 ಕೆ.ಜಿ 50 ಗ್ರಾಂ ಗಾಂಜಾ, ₹ 1700 ಹಾಗೂ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಲಾರಿ ಚಾಲಕನಾಗಿ ಕೆಲ ವರ್ಷ ಕೆಲಸ ಮಾಡಿದ್ದ ಹರ್ಷವರ್ಧನ್, ಒಡಿಶಾಗೆ ಆಗಾಗ ಹೋಗಿ ಬರುತ್ತಿದ್ದ. ಅಲ್ಲಿಯೇ ಈತನಿಗೆ ಪೆಡ್ಲ‌ರ್ ಪರಿಚಯವಾಗಿತ್ತು. ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರಕ್ಕೆ ತರುತ್ತಿದ್ದ ಈತ, ಅದನ್ನು ಮಾರಿ ಹಣ ಸಂಪಾದಿಸುತ್ತಿದ್ದ. ಇತ್ತೀಚೆಗೆ ಲಾರಿ ಚಲಾಯಿಸುವುದನ್ನು ಆರೋಪಿ ಬಿಟ್ಟಿದ್ದ.

ಒಡಿಶಾ ಪೆಡ್ಲರ್ ಜೊತೆ ಒಡನಾಟ ಹೊಂದಿದ್ದ ಆರೋಪಿ, ರೈಲಿನ ಮೂಲಕ ಗಾಂಜಾವನ್ನು ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ. ನಂತರ, ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದು, ನಂತರ ಸರಕು ಸಾಗಣೆ ವಾಹನದಲ್ಲಿ ಸುತ್ತಾಡಿ ಪರಿಚಿತ ಗ್ರಾಹಕರಿಗೆ ಗಾಂಜಾ ಮಾರುತ್ತಿದ್ದು, ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಈತನಿಂದ 12 ಕೆ. ಜಿ 50 ಗ್ರಾಂ ಗಾಂಜಾ ಹಾಗೂ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

- Advertisement -

Related news

error: Content is protected !!