Friday, April 26, 2024
spot_imgspot_img
spot_imgspot_img

ಮಂಜೇಶ್ವರ: ಮೀಯಪದವು ಗುಂಡಿನ ದಾಳಿ, ಕೊಲೆಯತ್ನ ಪ್ರಕರಣದಲ್ಲಿ ಶಾಮೀಲಾಗಿದ್ದ ವಿಟ್ಲ ಮೂಲದ ನವಾಫ್ ಸಹಿತ ಇಬ್ಬರ ಬಂಧನ

- Advertisement -G L Acharya panikkar
- Advertisement -

ಮ0ಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಗುಂಡು ಹಾರಿಸಿದ ಹಾಗೂ ಯುವಕನ ಕೊಲೆಯತ್ನ ಪ್ರಕರಣಗಳಲ್ಲಿ ಕಳೆದ 7 ತಿಂಗಳಿನಿ0ದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಡಿವೈಎಸ್‌ಪಿ ನೇತೃತ್ವದ ಗೂಂಡಾ ನಿಗ್ರಹದಳ ಬಂಧಿಸಿದೆ. ಬಂಧಿತ ಆರೋಪಿಯನ್ನು ವಿಟ್ಲ ಸಮೀಪದ ಮಿತ್ತನಡ್ಕ ನಿವಾಸಿ ನವಾಫ್ ಎನ್ನಲಾಗಿದೆ.

ಏಳು ತಿಂಗಳ ಹಿಂದೆ ಉಪ್ಪಳದ ಹಿದಾಯತ್ ನಗರದಲ್ಲಿ ಆರೋಪಿ ನವಾಫ್ ನೇತೃತ್ವದ ತಂಡವು ರಿವಾಲ್ವರ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ದಾಂದಲೆ ನಡೆಸಿತ್ತು. ಸ್ಥಳಕ್ಕೆ ಬಂದ ಮಂಜೇಶ್ವರ ಠಾಣಾ ಪೊಲೀಸರನ್ನು ಕಂಡು ತಂಡವು ಪರಾರಿಯಾಗಿತ್ತು. ಬಳಿಕ ಮೀಯಪದವು ಎಂಬಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ, ಬಿಯರ್ ಬಾಟ್ಲಿ ಎಸೆದು ತಂಡವು ಕರ್ನಾಟಕಕ್ಕೆ ಪರಾರಿಯಾಗಿತ್ತು.

ಹಿಂದಿನ ವಿಟ್ಲ ಪೊಲೀಸ್ ಠಾಣಾ ಎಸ್‌ಐ ಮೇಲೆ, ಗುಂಡು ಹಾರಿಸಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ, ಈತನು ಶಾಮೀಲಿದ್ದ ಎನ್ನಲಾಗಿದೆ. ಈತ ಎರಡು ವರ್ಷಗಳ ಹಿಂದೆ ಕಣ್ಣೂರಿನಲ್ಲಿ ಹುಸೈನಾರ್ ಎಂಬವರನ್ನು ತಡೆದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆ ಸಂಬ0ಧಪಟ್ಕ0ತೆ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು. ಇದೇ ತಂಡ ವಿಟ್ಲ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ನವಾಫ್ ಶಾಮೀಲಾಗಿದ್ದನು. ಇದೀಗ ಈತನನ್ನು ಕಾಸರಗೋಡು ಡಿವೈಎಸ್‌ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ನವಾಫ್ ಮಾದಕ ಸಾಗಾಟ ಪ್ರಕರಣದಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!