Sunday, June 29, 2025
spot_imgspot_img
spot_imgspot_img

ಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡುವ ಜಾಲದ ಬಂಧನ!!

- Advertisement -
- Advertisement -

ಕೇರಳದಲ್ಲಿ ಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡುವ ಜಾಲವೊಂದನ್ನು ಕೇರಳ ಪೊಲೀಸರು ಭೇದಿಸಿದ್ದಾರೆ. ಇದು ಸುಶಿಕ್ಷಿತರ ಊರು ಎಂಬ ಹಣೆಪಟ್ಟಿ ಹೊತ್ತಿರುವ ಕೇರಳಕ್ಕಾದ ದೊಡ್ಡ ಕಳಂಕ ಕೂಡ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 41 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಏಕಕಾಲದಲ್ಲಿ ಕೇರಳದ ವಿವಿಧೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. 286 ಪ್ರಕರಣ ದಾಖಲಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಐ ಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಿದ್ದಾರೆ.

6ರಿಂದ 15 ವರ್ಷದ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳ ಮೂಲಕ ಈ ಗುಂಪು ಶೇರ್ ಮಾಡುತ್ತಿತ್ತು. ಲಾಕ್ ಡೌನ್ ಅವಧಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಕೂಡ ಎಸಗಲಾಗಿತ್ತು ಎಂಬ ಅಂಶ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!