Wednesday, June 24, 2026
spot_imgspot_img
spot_imgspot_img

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಲೋಕಾರ್ಪನೆಗೆ ರೆಡಿ

- Advertisement -
- Advertisement -

ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂ ಈಗ ವಿಶ್ವದ ಗಮನ ಸೆಳೆದಿದೆ. ಯಾಕೆಂದರೆ ಇಲ್ಲಿ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಲಂಬ ಲಿಫ್ಟ್ ಸೇತುವೆಯನ್ನು ಪಂಬನ್‌ನಲ್ಲಿ ರಾಮ ನವಮಿಯ ದಿನವಾದ ಏಪ್ರಿಲ್ 6 ರಂದು ಉದ್ಘಾಟಿಸಲಿದ್ದಾರೆ.

ಇದು ದೇಶದ ಸಾರಿಗೆ ಮತ್ತು ಸಮುದ್ರ ಮೂಲ ಸೌಕರ್ಯದಲ್ಲಿ ಒಂದು ಹೊಸ ಮೈಲುಗಲ್ಲು. ಹೊಸ ಪಂಬನ್ ರೈಲ್ವೆ ಸೇತುವೆ 2.1 ಕಿ.ಮೀ. ಉದ್ದವನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 2024ರ ನವೆಂಬರ್ ನಲ್ಲಿ ಪೂರ್ಣಗೊಂಡಿತು. ಈ ಹೊಸ ಸೇತುವೆಯು 110 ವರ್ಷಗಳಷ್ಟು ಹಳೆಯದಾದ ರಚನೆಯನ್ನು ಬದಲಾಯಿಸಿದೆ . ಹೀಗಾಗಿ ಇದು ಅದ್ಬುತ ಎಂಜಿನಿಯರಿಂಗ್ ಕೆಲಸವಾಗಿ ಗುರುತಿಸಿಕೊಂಡಿದೆ. ರಾಮೇಶ್ವರಂ ದ್ವೀಪ ಮತ್ತು ಭಾರತದ ಮುಖ್ಯ ಭೂಭಾಗಕ್ಕೆ ಶೀಘ್ರದಲ್ಲಿ ಸುರಕ್ಷಿತವಾಗಿ ಈ ಸೇತುವೆ ಸಂಪರ್ಕವನ್ನು ಕಲ್ಪಿಸುತ್ತದೆ.

- Advertisement -

Related news

error: Content is protected !!