Saturday, August 8, 2026
spot_imgspot_img
spot_imgspot_img

ಸಿ.ಟಿ.ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರದೃಷ್ಟಕರ: ಸಚಿವ ದಿನೇಶ್ ಗುಂಡೂರಾವ್

- Advertisement -
- Advertisement -

ಪುತ್ತೂರು: ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ, ಇದು ಕಟ್ಟುಕಥೆಯಲ್ಲ ಅಲ್ಲದೆ ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆಸಿ.ಟಿ.ರವಿ ಹೇಳಿಕೆ ಸಹಿಸಲು ಅಸಾಧ್ಯವಾದುದು ಅವರ ಹೇಳಿಕೆಗೆ ಅಗತ್ಯ ಕಾನೂನು ಕ್ರಮ ಆಗಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಪುತ್ತೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸಭಾಪತಿಗಳೂ ಈ ವಿಚಾರವನ್ನು ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ, ಬಿಜೆಪಿಯವರು ದೇವರು, ಧರ್ಮ, ಭಾರತ್ ಮಾತಾ ಕಿ ಜೈ ಮಾತ್ರ ಹೇಳೋದು, ಆದರೆ ಮಹಿಳೆಯರ ಬಗ್ಗೆ ಅವರಿಗೆ ಗೌರವವಿಲ್ಲ ಎಂದರು.

- Advertisement -

Related news

error: Content is protected !!