Monday, April 29, 2024
spot_imgspot_img
spot_imgspot_img

ಭಾರೀ ಪ್ರಮಾಣದ ಅಕ್ರಮ ಚಿನ್ನ ವಶ

- Advertisement -G L Acharya panikkar
- Advertisement -

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು 25 ಕೋಟಿ ರೂ. ಮೌಲ್ಯದ 21 ಕೆ.ಜಿ. ಅಕ್ರಮ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಈ ಚಿನ್ನದ ಬಿಸ್ಕತ್ ಮತ್ತು ಆಭರಣಗಳಿಗೆ ಯಾವುದೇ ದಾಖಲೆಗಳಿರಲಿಲ್ಲ. ಗಲ್ಫ್ ದೇಶಗಳಿಂದ ಬಂದಿದ್ದ ಈ ಚಿನ್ನವನ್ನು ಮುಂಬೈಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಗಲ್ಫ್ ದೇಶದಿಂದ ಕೊರಿಯರ್ ಬಂದ ಈ ಸರಕನ್ನು ಹೈದರಾಬಾದ್​ನಲ್ಲಿ ಮುಂಬೈಗೆ ಹೋಗುವ ಸ್ಥಳೀಯ ಕಾರ್ಗೋ ಫ್ಲೈಟ್​ಗೆ ಹಾಕಲಾಗಿತ್ತು. ಸುಂಕದ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಈ ಸರಕು ಸಿಕ್ಕಿದೆ. ಯಾವುದಕ್ಕೂ ದಾಖಲೆಗಳಿಲ್ಲದ್ದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

2 ಕಿಲೋನಷ್ಟು ಚಿನ್ನದ ಬಿಸ್ಕತ್​ಗಳಿದ್ದರೆ, ಉಳಿದ 19 ಕಿಲೋ ಚಿನ್ನ ಹಾಗೂ ವಜ್ರದ ಆಭರಣಗಳಿವೆ ಎಂದು ಅಧಿಕಾರಿಗಳು ಹೇಳಿರುವುದು ತಿಳಿದುಬಂದಿದೆ. ಈ ಚಿನ್ನಗಳನ್ನ ಕೊರಿಯರ್ ಮೂಲಕ ಹೈದರಾಬಾದ್​ಗೆ ಕಳುಹಿಸಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಭಾರೀ ಪ್ರಮಾಣದ ಅಕ್ರಮ ಚಿನ್ನ ಸಿಕ್ಕಿದೆ.

- Advertisement -

Related news

error: Content is protected !!