Friday, May 3, 2024
spot_imgspot_img
spot_imgspot_img

ಡೆತ್‌ ನೋಟ್‌ ಬರೆದು ಮಗಳು ಆತ್ಮಹತ್ಯೆ

- Advertisement -G L Acharya panikkar
- Advertisement -

ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನನ್ನಿಂದ ಜೆಇಇ ಪಾಸ್‌ ಮಾಡಲು ಸಾಧ್ಯವಿಲ್ಲ, ನಾನು ಸೋತಿದ್ದೇನೆ ಎಂದು ಪೋಷಕರಿಗೆ ಪತ್ರ ಬರೆದಿಟ್ಟು ಕೋಟಾದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಿಹಾರಿಕಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ನಾನು ಸೋತಿರುವವಳು. ನಾನೊಬ್ಬ ಕೆಟ್ಟ ಮಗಳು, ಮಮ್ಮಿ, ಪಪ್ಪಾ ಕ್ಷಮಿಸಿ, ಇದೇ ನನ್ನ ಕೊನೆಯ ಆಯ್ಕೆ’ ಎಂದು ಡೆತ್‌ ನೋಟ್ ಬರೆದಿಟ್ಟಿದ್ದಾಳೆ.

ಕೋಟಾದಲ್ಲಿ ನಿಹಾರಿಕಾ ಕುಟುಂಬದೊಂದಿಗೆ ನಿಹಾರಿಕಾ ವಾಸವಿದ್ದಳು. ಜ. 30 ಮತ್ತು 31 ರಂದು ಆಕೆ ಜೆಇಇ ಪರೀಕ್ಷೆ ಬರೆಯಬೇಕಿತ್ತು. ಆದರೆ ವಿದ್ಯಾರ್ಥಿ ನಿ ಅತಿಯಾದ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾಗಿರುವಂತೆ ಕಾಣುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!