Saturday, May 4, 2024
spot_imgspot_img
spot_imgspot_img

ಅಕ್ರಮ ಸಂಬಂಧವನ್ನು ಮುಚ್ಚಿಡಲು ಪ್ರಿಯಕರ ಜೊತೆ ಸೇರಿ ಗಂಡನ ಹತ್ಯೆ..!

- Advertisement -G L Acharya panikkar
- Advertisement -

ದಾವಣಗೆರೆ: ಅಕ್ರಮ ಸಂಬಂಧದಿಂದ ಅದೆಷ್ಟೋ ಸಂಸಾರಗಳು ಮುರಿದುಬಿದ್ದು, ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಡಲು ಗಂಡನನ್ನೇ ಖತರ್ನಾಕ್ ಹೆಂಡತಿ ಕೊಲೆ ಮಾಡಿದ್ದಾಳೆ. ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೈದಿದ್ದಾಳೆ. ಕೊಲೆ ನಡೆದು ಎರಡು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ 38 ವರ್ಷದ ಲೋಕೇಶಪ್ಪ ಎಂಬ ವ್ಯಕ್ತಿಯನ್ನು ಆತನ ಹೆಂಡತಿ 30 ವರ್ಷದ ಪುಷ್ಪಾ ಅಲಿಯಾಸ್ ಕುಸುಮಾ ಕೊಲೆ ಮಾಡಿದ್ದಾಳೆ. ತನ್ನ ಪ್ರಿಯಕರನಾದ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾದ 35 ವರ್ಷದ ಪ್ರಭು ಲಿಂಗಪ್ಪ ಜೊತೆ ಸೇರಿಕೊಂಡು ಪುಷ್ಪಾ ಈ ಕೃತ್ಯ ಎಸಗಿದ್ದಾಳೆ.

ಇದನ್ನೂ ಓದಿ: ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಅರೆಸ್ಟ್​ ಮಾಡುವ ವೇಳೆ ಸೈನೈಡ್ ಸೇವಿಸಿ ಸಾವು!

ಜುಲೈ 27ರ ತಡರಾತ್ರಿ ಮನೆಯಲ್ಲೇ ಲೋಕೇಶಪ್ಪನನ್ನು ಕೊಲೆ ಮಾಡಲಾಗಿದೆ. ಆದರೆ, ಈ ಬಗ್ಗೆ ತನಗೇನೂ ಗೊತ್ತೇ ಇಲ್ಲ ಎಂಬಂತೆ ಪತ್ನಿ ಪುಷ್ಪಾ ನಟಿಸಿದ್ದಳು. ಪೊಲೀಸ್ ವಿಚಾರಣೆಯಲ್ಲಿ ಪುಷ್ಪಾ ಹಾಗೂ ಪ್ರಭು ಸೇರಿ ಈ ಕೊಲೆ ಮಾಡಿದ ವಿಷಯ ಬಯಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.

ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕತ್ತು ಹಿಸುಕಿ ಕೊಲೆ ಮಾಡಿರುವ ಪುಷ್ಪಾ ಬಳಿಕ ಅಮಾಯಕಳಂತೆ ವರ್ತಿಸಿದ್ದಳು. ಪ್ರಿಯಕರ ಪ್ರಭು ಲಿಂಗಪ್ಪನ ಜೊತೆ ಪುಷ್ಪಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಅಕ್ರಮಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಲೋಕೇಶಪ್ಪನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದಕ್ಕಾಗಿ ಜುಲೈ 27ರ ತಡರಾತ್ರಿ ತಮ್ಮ ಮನೆಯಲ್ಲೇ ಲೋಕೇಶಪ್ಪನನ್ನು ಇಬ್ಬರೂ ಸೇರಿ ಕೊಲೆ ಮಾಡಿದ್ದರು.

- Advertisement -

Related news

error: Content is protected !!