Saturday, April 20, 2024
spot_imgspot_img
spot_imgspot_img

ಕೇರಳ-ಕರ್ನಾಟಕ ನಿತ್ಯ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ – ಡಿಸಿಎಂ. ಡಾ.ಅಶ್ವಥ್‌ನಾರಾಯಣ್

- Advertisement -G L Acharya panikkar
- Advertisement -

ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ಬಂದು ಹೋಗುವವರಿಗೆ ಕೋವಿಡ್ ನೆಗೆಟಿವ್ ವರದಿ ಅಗತ್ಯವಿಲ್ಲ, ಅವರು ಆರೋಗ್ಯ ಸೇತು ಆಪ್ ಹೊಂದಿರುವುದು ಕಡ್ಡಾಯ. ಕೇರಳದಿಂದ ಬಂದು ದ.ಕ.ದಲ್ಲಿ ವಾಸ್ತವ್ಯ ಹೂಡುವವರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು.

ಈ ಕುರಿತು ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರು ತಿಳಿಸಿದ್ದಾರೆ.

ಕೇರಳದಿಂದ ಮಂಗಳೂರಿಗೆ ಶಾಲಾ- ಕಾಲೇಜು, ಅಸ್ಪತ್ರೆ, ವ್ಯವಹಾರ ನಿಮಿತ್ತ ಪ್ರತಿದಿನ ಬಂದು ಹೋಗುವವರು ಕೊರೋನಾ ನೆಗೆಟಿವ್ ವರದಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಕೋವಿಡ್‌ಗೆ ಸಂಬಂಧಿಸಿ ಮುನ್ನೆಚ್ಚರಿಕಾ ಕ್ರಮ ವಹಿಸುವುದು, ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ. ಈ ಮೂಲಕ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕೇರಳದಿಂದ ಬರುವವರಿಗೆ ಗಡಿ ನಿರ್ಬಂಧ ಆದೇಶದಿಂದ ಸಡಿಲಿಕೆ ನೀಡುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

- Advertisement -

Related news

error: Content is protected !!