Tuesday, June 9, 2026
spot_imgspot_img
spot_imgspot_img

ಮನೆಯ ಒಳಗಡೆ ಕೊಳೆತ ಸ್ಥಿತಿಯಲ್ಲಿ ತಂದೆ, ಮಗನ ಮೃತದೇಹ ಪತ್ತೆ

- Advertisement -
- Advertisement -

ಮನೆಯ ಒಳಗಡೆ ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಮೃತದೇಹ ಪತ್ತೆಯಾಗಿರುವ ಘಟನೆ ಕೋಲಾರ ಬಂಗಾರಪೇಟೆ ತಾಲೂಕಿನ ಎಂ.ವಿ. ನಗರದಲ್ಲಿ ನಡೆದಿದೆ.

ಕಳೆದ 6 ತಿಂಗಳ ಹಿಂದೆಯಷ್ಟೇ ತಾಯಿ ತೀರಿಕೊಂಡಿದ್ದು, ತಂದೆ ಮಗ ಇಬ್ಬರು ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ವಸಂತರಾಜುಲು (84) ಹಾಗೂ ಸೂರ್ಯ ಪ್ರಕಾಶ್ (40) ಮೃತಪಟ್ಟಿರುವ ತಂದೆ-ಮಗ. ತಾಯಿ ತೀರಿಕೊಂಡ ಹಿನ್ನೆಲೆ ಮಗ ಮಾನಸಿಕವಾಗಿ ಕೊರಗಿದ್ದಲ್ಲದೆ 12 ದಿನಗಳ ಹಿಂದೆಯೇ ಹೃದಯಾಘಾತದಿಂದ ಪ್ರಾಣ ಬಿಟ್ಟರೆ ಅತ್ತ ವಯಸ್ಸಾದ ತಂದೆಗೆ ಆರೈಕೆ ಮಾಡುವವರಿಲ್ಲದೆ ನರಳಾಡಿ ಪ್ರಾಣ ಬಿಟ್ಟಿರುವ ಶಂಕೆ ಮೂಡಿದೆ.
ಅಕ್ಕ ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನ ದಳ ಸಿಬ್ಬಂದಿ, ಬೆರಳಚ್ಚು ತಜ್ಞರ ತಂಡ ಹಾಗೂ ಕೆಜಿಎಫ್ ಎಸ್‌ಪಿ ಶಾಂತಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!