Monday, June 8, 2026
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ವೃದ್ಧೆ ಮೃತದೇಹ ಹೊಳೆಯಲ್ಲಿ ಪತ್ತೆ

- Advertisement -
- Advertisement -

ಕಾಸರಗೋಡು: ನಾಪತ್ತೆಯಾಗಿದ್ದ ವೃದ್ಧೆಯೋರ್ವರ ಮೃತದೇಹ ಕಾಸರಗೋಡು ಕುಂಬಳೆ ಹೊಳೆಯಲ್ಲಿ ಪತ್ತೆಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ಬದಿಯಡ್ಕ ನಾರಂಪಾಡಿಯ ಲೀಲಾವತಿ (60) ಮೃತ ದುರ್ದೈವಿ.

ಕುಂಬಳೆ ನದಿಯ ಸೇತುವೆ ಸಮೀಪ ವೃದ್ಧೆಯ ಮೃತ ದೇಹ ಪತ್ತೆಯಾಗಿದ್ದು, ಉಪ್ಪಳ ದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಮೃತ ದೇಹವನ್ನು ದಡಕ್ಕೆ ತಲುಪಿಸಿ, ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಮನೆಯಿಂದ ಔಷಧಿ ಖರೀದಿಸಲೆಂದು ಹೊರಟಿದ್ದ ಲೀಲಾವತಿ ರಾತ್ರಿಯಾದರೂ ಮನೆಗೆ ಮರಳಿಲ್ಲ. ಈ ಹಿನ್ನಲೆಯಲ್ಲಿ ಪುತ್ರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಮಹಿಳೆ ಆಟೋ ರಿಕ್ಷಾದಲ್ಲಿ ಕುಂಬಳೆ ದೇವಸ್ಥಾನ ತನಕ ಬಂದಿರುವುದು ತಿಳಿದು ಬಂದಿತ್ತು. ಈ ನಡುವೆ ಗುರುವಾರ ಸಂಜೆ ಕುಂಬಳೆ ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!