Wednesday, October 28, 2026
spot_imgspot_img
spot_imgspot_img

ಕಾರವಾರ: ಬೋಟ್ ನಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ಸಾವು, ಓರ್ವ ಗಂಭೀರ

- Advertisement -
- Advertisement -

ಕಾರವಾರ: ಉಸಿರುಗಟ್ಟಿ ಬೋಟ್‌ನಲ್ಲಿ ಮೂವರು ಮೀನುಗಾರರು ಸಾವನ್ನಪ್ಪಿರುವ ಘಟನೆ ಗೋಕರ್ಣದ ತದಡಿ ಬಂದರಿನಲ್ಲಿ ನಡೆದಿದೆ.

ನೌಶಾದ್(48), ಅಮೀನ್(40), ಅಮನ್(26) ಸಾವಿಗೀಡಾದ ಮೀನುಗಾರರು. ಇಬ್ಬರು ಮೀನುಗಾರರ ರಕ್ಷಣೆ ಮಾಡಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಬ್ದುಲ್ ಯಾಕುಬ್ ದಾಡಿಯಾ (60) ಅಸ್ವಸ್ಥಗೊಂಡಿದ್ದು, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೀನುಗಾರರು ತದಡಿ ಬಂದರಿನ ಕುಚೈಮಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೀನುಗಾರಿಕೆ ಮುಗಿಸಿ ಚಮನ್ ಮೀನುಗಳೊಂದಿಗೆ ಬಂದರಿಗೆ ಮರಳಿದ್ದ ಅವರು, ಬೋಟ್‌ನಲ್ಲಿದ್ದ ಮೀನುಗಳನ್ನು ಸಂಗ್ರಹದ ಸ್ಥಳದಿಂದ ಖಾಲಿ ಮಾಡಿ, ಬಳಿಕ ಆ ಜಾಗವನ್ನು ಸ್ವಚ್ಛಗೊಳಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ.

ಮೀನು ಸಂಗ್ರಹಿಸಿದ್ದ ಸ್ಥಳದಲ್ಲಿದ್ದ ವಾಸನೆ ಅಥವಾ ವಿಷಕಾರಿ ಅನಿಲದಿಂದ ಉಸಿರಾಟಕ್ಕೆ ತೊಂದರೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನೆ ಸಂಬಂಧ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!