Sunday, January 24, 2021

ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಪೊಲೀಸರಿಗೆ ಶಾಕ್!

ಹೈದರಾಬಾದ್​: ಭಾನುವಾರ ಮುಂಜಾನೆಯೇ ಭಯ ಹುಟ್ಟಿಸುವ ಘಟನೆ ನಡೆದಿದ್ದು, ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಹೈದರಾಬಾದ್​, ರಾಜೇಂದ್ರನಗರ ಪೊಲೀಸರಿಗೆ ಶಾಕ್​ ಒಂದು ಎದುರಾಗಿತ್ತು.

ಪಿವಿಎನ್​ಆರ್​ ಎಕ್ಸ್​ಪ್ರೆಸ್​ವೇನ ಪಿಲ್ಲರ್​ ನಂಬರ್​ 223ರ ಸಮೀಪದ ರಸ್ತೆ ಬದಿಯಲ್ಲಿ ಸೂಟ್​ಕೇಸ್​ ಪತ್ತೆಯಾಗಿದ್ದು, ತೆರೆದು ನೋಡಿದ ಪೊಲೀಸರು ಮೃತದೇಹವನ್ನು ಕಂಡು ಶಾಕ್​ ಆಗಿದ್ದಾರೆ. ಸತ್ತವನನ್ನು 25 ವರ್ಷದ ಆಟೋ ಚಾಲಕ ರಿಯಾಜ್​ ಎಂದು ಗುರುತಿಸಲಾಗಿದ್ದು, ಈತ ಶನಿವಾರದಿಂದ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಕುರಿತು ಎಸಿಪಿ ಸಂಜಯ್​ ಕುಮಾರ್​ ಮಾತನಾಡಿ, ರಾಜೇಂದ್ರನಗರ ಪೊಲೀಸ್​ ಗಸ್ತು ಪಡೆ ಭಾನುವಾರ ಬೆಳ್ಳಂಬೆಳಗ್ಗೆ ಸುಮಾರು 3.30ರ ಸುಮಾರಿಗೆ ಅರಾಮ್​ಘರ್​-ಮೆಹದಿಪಟ್ನಂದ ಪಿಲ್ಲರ್​ ನಂ. 223ರಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ನೋಡಿದರು. ತೆರೆದು ನೋಡಿದಾಗ ಮೃತದೇಹವೊಂದು ಪತ್ತೆಯಾಯಿತು. ದೇಹದ ಮೇಲೆ ಕೆಲವೊಂದು ಗಾಯದ ಗುರುತುಗಳಿದ್ದವು. ಮೃತನನ್ನು ರಿಯಾಜ್​ ಎಂದು ಗುರುತಿಸಲಾಗಿದೆ. ಆತ ಹೈದರಾಬಾದ್​ ಓಲ್ಡ್​ ಸಿಟಿಯ ಚಂದ್ರಯಾಂಗುಟ್ಟದ ನಿವಾಸಿ ಎಂದು ಮಾಹಿತಿ ನೀಡಿದ್ದಾರೆ.

ರಿಯಾಜ್​ ಪತ್ನಿ ಶನಿವಾರವಷ್ಟೇ ನಾಪತ್ತೆ ಪ್ರಕರಣ ದಾಖಲಿಸಿದ್ದಳು. ತನಿಖೆ ನಡೆಯುತ್ತಿರುವಾಗಲೇ ಮೃತದೇಹ ಪತ್ತೆಯಾಗಿದೆ. ಇತರೆ ಆಟೋ ಚಾಲಕನ ದ್ವೇಷಕ್ಕೆ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಎಸಿಪಿ ಸಂಜಯ್​ ಕುಮಾರ್​ ಹೇಳಿದರು.

- Advertisement -

MOST POPULAR

HOT NEWS

Related news

error: Content is protected !!