Tuesday, July 1, 2025
spot_imgspot_img
spot_imgspot_img

ಯಕ್ಷಗಾನ ವಿದ್ವಾಂಸ ಬಿ. ಗೋಪಾಲಕೃಷ್ಣ ಕುರುಪ್‌ ನಿಧನ

- Advertisement -
- Advertisement -

ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ ಮತ್ತು ಯಕ್ಷಗಾನದ ಪರಂಪರೆಯ ಬಗ್ಗೆ ಅಪೂರ್ವ ಜ್ಞಾನವನ್ನು ಹೊಂದಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ಗೋಪಾಲಕೃಷ್ಣ ಕುರುಪ್ (90ವರ್ಷ) ಮಾರ್ಚ್ 19 ರಂದು ನಿಧನರಾದರು.

ಚೆಂಡೆ-ಮದ್ದಲೆ ನುಡಿತಗಳಲ್ಲಿ ಅಪೂರ್ವಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಪಠ್ಯರೂಪದಲ್ಲಿ ದಾಖಲಿಸಿದ ಮೊದಲಿಗರಾಗಿದ್ದರು.1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶದೊಂದಿಗೆ ಮದ್ದೆಗಾರ ಕುದ್ರೆಕೂಡ್ಲು ರಾಮಭಟ್ ಇವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದರು. ಹಿರಿಯ ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಕುದ್ರೆಕೂಡ್ಲು ರಾಮ ಭಟ್ಟ, ನಾರಂಪಾಡಿ ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟರ ಗುರುತನದಲ್ಲಿ ಸಿದ್ಧಿಯನ್ನು ಪಡೆದರು.

- Advertisement -

Related news

error: Content is protected !!