Saturday, June 27, 2026
spot_imgspot_img
spot_imgspot_img

ಮಂಗಳೂರು: ಮೇಪಲ್ ಶೋರೂಂಗೆ ನುಗ್ಗಿದ ಚೋರರು; ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಕಳವು!

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಬಲ್ಮಠದಲ್ಲಿರುವ ಮೇಪಲ್ ಶೋರೂಂಗೆ ಕಳ್ಳರು ನುಗ್ಗಿ ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ಐಫೋನ್, ಆ್ಯಪಲ್ ಫೋನ್ ಗಳನ್ನು ಕಳವು ಮಾಡಿದ್ದಾರೆ.

ಶನಿವಾರ ಹಾಗೂ ಭಾನುವಾರ ವೀಕೆಂಡ್ ಲಾಕ್ ಡೌನ್ ಇದ್ದದರಿಂದ ಶೋರೂಂ ಅನ್ನು ಇಂದು ಬೆಳಗ್ಗೆ ಓಪನ್ ಮಾಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಮೇಪಲ್ ಶೋರೂಂ ಹಿಂಭಾಗದ ಕಿಟಕಿಯನ್ನು ಒಡೆದು ಕಳ್ಳರು ನುಗ್ಗಿ ಲಕ್ಷಾಂತರ ಬೆಲೆಬಾಳುವ ಮೊಬೈಲ್ ಗಳನ್ನು ಕಳವು ಮಾಡಿದ್ದಾರೆ. ಶೋರೂಂ ಸಿಬ್ಬಂದಿ ಇಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿರುವುದು ಕಂಡುಬಂದಿದೆ. ಈ ಕೃತ್ಯದ ಬಳಿಕ ಕಳ್ಳರು ಶೋರೂಂ ಒಳಗಿದ್ದ ಸಿಸಿಟಿವಿಯ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿರುವ ಮಂದಿಯೇ ಆಗಿರಬೇಕು ಎಂಬ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿರುವ ಏಕೈಕ ಆ್ಯಪಲ್, ಐಫೋನ್ ಡೀಲರ್ ಶಾಪ್ ಇದಾಗಿದ್ದು ಅತ್ಯಧಿಕ ಬೆಟ್ರಿಯ ಮೊಬೈಲ್ ಗಳು ಮಾತ್ರ ಇಲ್ಲಿರುತ್ತವೆ. ಐಫೋನ್ ಸಾಧಾರಣ ಮಟ್ಟದ್ದು ಕನಿಷ್ಠ ಅಂದ್ರೆ 70 ಸಾವಿರ ರೂ. ಮೌಲ್ಯವಿದ್ದು ಒಂದೂವರೆ ಲಕ್ಷದವರೆಗೂ ಬೆಲೆಯದ್ದಿದೆ. ಹೀಗಾಗಿ ನೂರಕ್ಕೂ ಹೆಚ್ಚು ಮೊಬೈಲ್ ಕಳವಾಗಿದ್ದರೂ ಅದರ ಮೌಲ್ಯ 50ರಿಂದ 70 ಲಕ್ಷ ಆಗುತ್ತದೆ. ಈಗ ಎಷ್ಟು ಮೊಬೈಲ್ ಕಳವಾಗಿದೆ ಎಂದು ಸರಿಯಾದ ಲೆಕ್ಕ ಸಿಕ್ಕಿಲ್ಲವೆಂದು ತಿಳಿದುಬಂದಿದೆ.

- Advertisement -

Related news

error: Content is protected !!