- Advertisement -
- Advertisement -





ಶ್ರೀನಗರ: ಶೋಧ ಕಾರ್ಯಾಚರಣೆಯ ವೇಳೆ ಸೇನಾ ಸಿಬಂದಿಯೊಬ್ಬರು ಶುಕ್ರವಾರ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಚಿಗಾಮ್‌ನಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಎ ಕೆಟಗರಿ ಉಗ್ರ ಜುನೈದ್ ಅಹ್ಮದ್ ಭಟ್ ಹತನಾದ ನಂತರ ಹರ್ವಾನ್‌ನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.ಮೃತ ಯೋಧ 34 ಅಸ್ಸಾಂ ರೈಫಲ್ಸ್‌ನ ಜಸ್ವಿಂದರ್ ಸಿಂಗ್ ಎಂದು ಸೇನೆ ತಿಳಿಸಿದೆ.ಮಂಗಳವಾರದ ಎನ್‌ಕೌಂಟರ್ ನಂತರ ಇನ್ನೂ ಕೆಲ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಅರಣ್ಯ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯ ನಡೆಸುತ್ತಿದ್ದಾರೆ.
- Advertisement -








