Sunday, June 21, 2026
spot_imgspot_img
spot_imgspot_img

ಕಡಬ : ಹುಲ್ಲು ತರಲು ಹೋದ ಮಹಿಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

- Advertisement -
- Advertisement -

ಕಡಬ : ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ಮಹಿಳೆಯೊಬ್ಬರು ತೋಟದಲ್ಲಿರುವ ಕೆರೆಗೆ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಕಡಬ ಸಮೀಪ ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ನಡೆದಿದೆ.

ನಿವೃತ್ತ ಸೈನಿಕ ಚಿದಾನಂದ ಎಂಬವರ ಪತ್ನಿ ಕುಶಾಲವತಿ ಮೃತ ಮಹಿಳೆ. ಚಿದಾನಂದರವರು ಸೈನಿಕ ಹುದ್ದೆಯಿಂದ ನಿವೃತ್ತರಾದ ನಂತರ ಬಲ ಗ್ರಾಮದ ದೇರಾಜೆ ಎಂಬಲ್ಲಿ ಜಮೀನು ಖರೀದಿಸಿ ಅಡಿಕೆ ತೋಟ ಕೃಷಿ ಹಾಗೂ ಹೈನುಗಾರಿಕೆ ಮಾಡಿಕೊಂಡಿದ್ದರು.
ಕುಶಾಲವತಿಯವರು ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದಾಗ ತೋಟದ ಮಧ್ಯದಲ್ಲಿರುವ ಕೆರೆಗೆ ಆಕಸ್ಮಿಕವಾಗಿ
ಕಾಲು ಜಾರಿ ಬಿದ್ದಿರುತ್ತಾರೆ.
ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!