Monday, January 25, 2021

ವಾಮಾಚಾರದ ಆರೋಪ-ಟೆಕ್ಕಿಯ ಸಜೀವ ದಹನ

ಹೈದರಾಬಾದ್: ವಾಮಾಚಾರದ ಆರೋಪ ಹೊರಿಸಿ ಸಾಪ್ಟವೇರ್ ಪರಿಣಿತರೊಬ್ಬರನ್ನು ಜೀವಂತವಾಗಿ ಬೆಂಕಿ ಹಚ್ಚಿ ಕೊಂದ ಘಟನೆ ಹೈದರಾಬಾದ್ ಸಮೀಪ ವರದಿಯಾಗಿದೆ.

ಜಗತಿಯಾಲ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟ ಟೆಕ್ಕಿಯನ್ನು ರಾಚಾರ್ಲಾ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಆದರೆ ಈ ಘಟನೆ ಗೊಂದಲದ ಗೂಡಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ಕುಮಾರ್ ಪತ್ನಿಯನ್ನು ಕೂಡ ಬಂಧಿಸಲಾಗಿದೆ. ಪವನ್ ಕುಮಾರ್ ಬಾಮೈದ ಇತ್ತೀಚೆಗೆ ಮೃತಪಟ್ಟಿದ್ದರು. ಇದಕ್ಕೆ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.

ಪವನ್ ಕುಮಾರ್ ಅವರನ್ನು ಕುರ್ಚಿಯಲ್ಲಿ ಕಟ್ಟಿ ಹಾಕಿ ಜೀವಂತವಾಗಿ ದಹಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪವನ್ ಕುಮಾರ್ ಹತ್ತಿರದ ಸಂಬಂಧಿಕರಾಗಿರುವ ಆರು ಮಂದಿಯನ್ನು ಬಂಧಿಸಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!