- Advertisement -
- Advertisement -
ಪುತ್ತೂರು: ಹುಲ್ಲು ತರಲೆಂದು ತೋಟಕ್ಕೆ ಹೋದ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟಿರುವ ಕುರಿತು ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದಲ್ಲಿ ಜು.16ರಂದು ನಡೆದಿದೆ.

ಪಡುವನ್ನೂರು ಗ್ರಾಮದ ಗಣಪತಿ ಭಟ್ ಕೆದಂದೂರು(58ವ) ಅವರು ಹಸುಗಳಿಗೆ ಹುಲ್ಲು ತರಲೆಂದು ತಮ್ಮ ತೋಟಕ್ಕೆ ಹೋಗಿ ಕೆರೆಯ ಪಕ್ಕದಲ್ಲಿ ಹುಲ್ಲಿನ ಕಟ್ಟ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಅವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಹುಲ್ಲು ತರಲು ತೋಟಕ್ಕೆ ಹೋದ ಗಣಪತಿ ಭಟ್ ಬಂದಿಲ್ಲ ಎಂದು ಮನೆ ಮಂದಿ ಹುಡುಕಾಡಿದಾಗ ತೋಟದ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂದಿಸಿ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ. ಉದಯ ರವಿ, ಸಿಬ್ಬಂದಿಗಳು ತೆರಳಿ ಮಾಹಿತಿ ಕಲೆ ಹಾಕಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

- Advertisement -