Wednesday, July 2, 2025
spot_imgspot_img
spot_imgspot_img

ಮನೆಗೆ ನುಗ್ಗಿ ಮೂವರಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದಂತೆ ಟ್ರಕ್ ಡಿಕ್ಕಿ- ಗಂಭೀರ ಗಾಯ

- Advertisement -
- Advertisement -

ಲಕ್ನೋ: ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ಇಬ್ಬರು ಮಕ್ಕಳೊಂದಿಗೆ ಮಹಿಳೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅರ್ಚನಾ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಣ ಬಿಟ್ಟಿದ್ದಾಳೆ. ಖಿನ್ನತೆಗೆ ಒಳಗಾದ ಅವನೀಶ್ ನಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಬೆಂಕಿ ಕಚ್ಚಿ ಕೊಲೆಗೈದು ಸ್ಥಳದಿಂದ ಪರಾರಿಯಾಗುವ ವೇಳೆ ಈತ ಟ್ರಕ್‍ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಅರ್ಚನಾ ಅಡುಗೆ ಮನೆಯಲ್ಲಿದ್ದಳು. ಪತಿ ಜಿತೇಂದ್ರ ಮನೆಯ ಇನ್ನೊಂದು ಕೋಣೆಯಲ್ಲಿ ಕುಳಿತಿದ್ದನು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಅವನೀಶ್ ಇಬ್ಬರು ಮಕ್ಕಳು ಮತ್ತು ಅರ್ಚಾನಾ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಮಕ್ಕಳು ಮತ್ತು ಪತ್ನಿಯ ಕಿರುಚಾಟವನ್ನು ಕೇಳಿ ಪತಿ ಓಡಿ ಬಂದಿದ್ದಾನೆ. ನೆರೆಹೊರೆಯವರು ಮೂವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಚಿಕಿತ್ಸೆಯ ಸಮಯದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಅವರ ತಾಯಿ ಸೋಮವಾರ ತಡರಾತ್ರಿ ಕಾನ್ಪುರದ ಉರ್ಸಲಾ ಹಾಸ್ರ್ಮನ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಬಲಿಯಾಗಿದ್ದಾರೆ.

ಬೆಂಕಿ ಹಚ್ಚಿ ಓಡಿ ಹೋಗುತ್ತಿದ್ದ ಅವನೀಶ್‍ನನ್ನು ಸ್ಥಳೀಯರು ಹಿಂಬಾಲಿಸಿದ್ದಾರೆ. ತಪ್ಪಿಸಿಕೊಳ್ಳುವ ವೇಳೆ ಟ್ರಕ್‍ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತೆಗೆ ದಾಖಲಾಗಿದ್ದಾನೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವನೀಶ್ ಖಿನ್ನತೆಗೆ ಒಳಗಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಅಪರಾಧವನ್ನು ಮಾಡಲು ಅವನನ್ನು ಪ್ರೇರೇಪಿಸಿದ್ದು ಯಾರು ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾನ್ಪುರ್ ದೇಹತ್, ಕೇಶವ್ ಕುಮಾರ್ ಚೌಧರಿ ಹೇಳಿದ್ದಾರೆ.

- Advertisement -

Related news

error: Content is protected !!