Tuesday, June 30, 2026
spot_imgspot_img
spot_imgspot_img

ಕೌಟುಂಬಿಕ ಕಲಹದಿಂದಾಗಿ ಹೆಂಡತಿ, ಮಗಳನ್ನೇ ಬರ್ಬರವಾಗಿ ಕೊಂದ ವ್ಯಕ್ತಿ!

- Advertisement -
- Advertisement -

ತಮಿಳುನಾಡು: ಕೌಟುಂಬಿಕ ಕಲಹದಿಂದಾಗಿ ಹೆಂಡತಿ, ಮಗಳನ್ನೇ ತಂದೆಯೊಬ್ಬ ಕೊಲೆಗೈದ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.

ಆರೋಪಿ ಕಲಬುರ್ಗಿಯ ನಿವಾಸಿ ದಿಗಂಬರ ಹಣಮಂತಪ್ಪ ಗಾಂಜಲಿ ಎನ್ನಲಾಗಿದೆ. ಆರೋಪಿಯ ಪತ್ನಿ ಜಗದೇವಿ(35) ಪುತ್ರಿ ಪ್ರಿಯಾಂಕ (11) ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಸೇಡಂಗೆ ಬಂದು ನೆಲೆಸಿದ್ದಂತ ಕುಟುಂಬವು, ಪಾನಿಪುರಿ ವ್ಯಾಪಾರ ಮಾಡುತ್ತಿತ್ತು. ಹೀಗೆ ನೆಲೆಸಿದ್ದಂತ ಕುಟುಂಬದಲ್ಲಿ ಕೌಟುಂಬಿಕ ಕಲಹ ಉಂಟಾಗಿದ್ದರಿಂದಾಗಿ ಪತ್ನಿ ಜಗದೇವಿ ಹಾಗೂ ಪುತ್ರಿ ಪ್ರಿಯಾಂಕಾ ಳನ್ನು, ಕಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ಆ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!