Thursday, May 2, 2024
spot_imgspot_img
spot_imgspot_img

ರಾತ್ರಿ ವೇಳೆ ರೈಲಿನಲ್ಲಿ ಬರುತ್ತಿದ್ದ ಗೃಹಿಣಿ ಸಾವು – ಕೊಲೆ ಮಾಡಿರುವ ಶಂಕೆ

- Advertisement -G L Acharya panikkar
- Advertisement -

ರಾತ್ರಿ ವೇಳೆ ರೈಲಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಗೃಹಿಣಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಅನ್ನಪೂರ್ಣ ಎಂದು ಗುರುತಿಸಲಾಗಿದೆ.

ಮೃತಳ‌ ಕುಟುಂಬಸ್ಥರು ಅನ್ನಪೂರ್ಣ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದು ರೈಲಿನಿಂದ ತಳ್ಳಿದ್ದಾರೆ.

ಆಕೆ ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮಹಿಳೆಯರಿಗಾಗಿ ಮೀಸಲಿದ್ದ ರೈಲ್ವೆ ಬೋಗಿಯಲ್ಲಿ ಬೆಂಗಳೂರಿನತ್ತ ಹೊರಟಿದ್ದಳು. ಮಹಿಳೆಯರಿಗೆ ಪ್ರತ್ಯೇಕ ಇರುವ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದಳು. ಜೊತೆಗೆ ಸಹೋದರ ಕೂಡ ಬಂದಿದ್ದಾನೆ. ಆದರೆ ಆತ ಬೇರೆ ಬೋಗಿಯಲ್ಲಿದ್ದ. ಆದರೆ, ಆಕೆ ಬೆಂಗಳೂರಿನಲ್ಲಿ ಇಳಿದಿಲ್ಲ. ಆದರೆ ಈ ಮಧ್ಯೆ ಮಾರ್ಗಮಧ್ಯೆ ಶವವಾಗಿ ಪತ್ತೆಯಾಗಿದ್ದಾಳೆ.

ಅನ್ನಪೂರ್ಣರವರು ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿದ್ದರು. ಇವರ ಕುಟುಂಬಸ್ಥರು ಕೂಡ ಒಳ್ಳೆಯ ಕರ್ತವ್ಯದಲ್ಲಿದ್ದಾರೆ. ಬೆಂಗಳೂರಿನಲ್ಲಿ ತನ್ನ ಮಗನ ಜೊತೆ ವಾಸವಿದ್ದ ಅನ್ನಪೂರ್ಣ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದರಂತೆ. ಶಿವಮೊಗ್ಗದಲ್ಲಿ ತಮ್ಮ ಸಹೋದರರ ಮನೆಗಳಿಗೆ ಭೇಟಿ ‌ನೀಡಿ ಕೆಲಸವೂ ಮುಗಿಸಿ ಮತ್ತೆ ಬೆಂಗಳೂರಿನತ್ತ ಮೊನ್ನೆ ರಾತ್ರಿ ವಾಪಸ್ ಆಗಿದ್ದಾಳೆ‌.

ತನ್ನ ಸಹೋದರ ಬ್ರಹ್ಮಾನಂದ ಜೊತೆ ಒಟ್ಟಾಗಿ ಬೆಂಗಳೂರಿಗೆ ರಾತ್ರಿ 12.15 ರ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ‌. ಅನ್ನಪೂರ್ಣ ಮಹಿಳೆಯರ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ ಸಹೋದರ ಬೇರೆ ಬೋಗಿಯಲ್ಲಿ ಬಂದನಂತೆ. ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಾಗ ಸಹೋದರ ಬ್ರಹ್ಮಾನಂದ ರಾನಡೆ ಅನ್ನಪೂರ್ಣಗೆ ಕಾಲ್ ಮಾಡಿದಾಗ ರಿಸಿವ್ ಮಾಡಿಲ್ಲವಂತೆ.

ಎಲ್ಲೋ ಕೆಲಸಕ್ಕೆ ತಡವಾಗುತ್ತೆ ಅಂತಾ ಬೇಗನೆ ಇಳಿದು ಹೋಗಿರಬಹುದು ಅಂತಾ ಸಹೋದರ ಸೀದಾ ಮತ್ತೊಬ್ಬ ಸಹೋದರಿ ಮನೆಗೆ ಹೋಗಿದ್ದಾ‌ನೆ. ಆದರೆ ಇತ್ತ ಎಷ್ಟೊತ್ತು ಕಳೆದರೂ ಮನೆಗೆ ಅನ್ನಪೂರ್ಣ ಬಾರದಿದ್ದಾಗ ಅನ್ನಪೂರ್ಣ ಪುತ್ರ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ.

ಆಗ ಕೂಡಲೇ ಸಂಬಂಧಿಕರು ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ತುಮಕೂರಿನ ಹಿರೇಹಳ್ಳಿ ಬಳಿ ಒಂದು ಮಹಿಳೆ ಶವ ಸಿಕ್ಕಿದೆ ಅಂತಾ ಫೋಟೋ ತೋರಿಸಿದಾಗ ಅನ್ನಪೂರ್ಣ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಇನ್ನು ಮೃತಳ‌ ಕುಟುಂಬಸ್ಥರು ಅನ್ನಪೂರ್ಣ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಗಟ್ಟಿಗಿತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದಿದ್ದಾರೆ. ರೈಲಿನಿಂದ ತಳ್ಳಿದ್ದಾರೆ.

ಅನ್ನಪೂರ್ಣಾಗೆ ಕುತ್ತಿಗೆ ಭಾಗ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಅಲ್ಲದೇ ಫೋನ್ ಕೂಡ ಆನ್ ನಲ್ಲಿದ್ದು, ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಎರಡು ಲಗೇಜ್ ಬ್ಯಾಗ್ ಗಳು ಸಿಕ್ಕಿವೆ. ಇನ್ನೆರಡು ಬ್ಯಾಗ್ ಗಳು ಪತ್ತೆಯಾಗಿಲ್ಲ. ಅಲ್ಲದೇ ಮೈ ಮೇಲೆ ಒಡವೆಗಳಿದ್ದವು. ಅವು ಕಾಣಿಸುತ್ತಿಲ್ಲ. ಹೀಗಾಗಿ ಯಾರೋ ಒಡವೆಗಳಿಗೆ ಕೊಲೆಗೈದಿರಬಹುದು ಎಂದು ಕುಟುಂಬಸ್ಥರುಸಂಶಯ ವ್ಯಕ್ತಪಡಿಸಿದ್ದಾರೆ .

ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಕೊಲೆ ಎಂದು ತಿಳಿದುಬಂದಿದ್ದು, ಪೊಲೀಸರ ತನಿಖೆ ಬಳಿಕ ಸತ್ಯ ತಿಳಿಯಲಿದೆ.

- Advertisement -

Related news

error: Content is protected !!