Thursday, May 16, 2024
spot_imgspot_img
spot_imgspot_img

ಭಾರತದ 8 ಮಾಜಿ ನೌಕಾಪಡೆ ಅಧಿಕಾರಿಗಳಿಗೆ ಕತಾರ್‌ನಲ್ಲಿ ಮರಣದಂಡನೆ

- Advertisement -G L Acharya panikkar
- Advertisement -

ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಗೆ ಕತಾರ್‌ನ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಈ ಶಿಕ್ಷೆಗೆ ಭಾರತವು ಆಘಾತ ವ್ಯಕ್ತಪಡಿಸಿದೆ. ಕತಾರ್ ನ ನ್ಯಾಯಾಲಯವು ಮರಣದಂಡನೆ ವಿಧಿಸಿರುವ ಬಗ್ಗೆ ವಿದೇಶಾಂಗ ಇಲಾಖೆ ತಿಳಿಸಿದೆ.

“ನಮಗೆ ಈ ಎಂಟು ಜನರಿಗೆ ವಿಧಿಸಿರುವ ಶಿಕ್ಷೆಯ ವಿಚಾರವಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮರಣದಂಡನೆ ವಿಧಿಸಲಾಗಿದೆ ಎಂಬುದನ್ನು ತಿಳಿದು ತೀವ್ರ ಆಘಾತವಾಗಿದೆ. ಇವರ ಕುಟುಂಬದ ಸದಸ್ಯರ ಜೊತೆ ಮತ್ತು ಕಾನೂನು ತಂಡದ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯರಿಗೆ ಎಲ್ಲ ಬಗೆಯ ರಾಜತಾಂತ್ರಿಕ ನೆರವು ಹಾಗೂ ಕಾನೂನು ನೆರವನ್ನು ನೀಡಲಾಗುತ್ತದೆ. ಆದೇಶದ ಬಗ್ಗೆ ಕತಾರ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದೆ.

‘ಪ್ರಕರಣದ ಗೌಪ್ಯತೆಯ ಕಾರಣದಿಂದಾಗಿ ಈ ಹಂತದಲ್ಲಿ ಇನ್ನೂ ಹೆಚ್ಚು ಮಾತನಾಡುವುದು ಸರಿಯಾಗಲಿಕ್ಕಿಲ್ಲ ಎಂದು ಸಚಿವಾಲಯ ಹೇಳಿದೆ. ಕತಾರ್‌ನಲ್ಲಿರುವ ಭಾರತದ ರಾಯಭಾರಿಯು ಈ ಎಂಟು ಮಂದಿಯನ್ನು ಅಕ್ಟೋಬರ್ ೧ ರಂದು ಜೈಲಿನಲ್ಲಿ ಭೇಟಿ ಮಾಡಿದ್ದರು.

- Advertisement -

Related news

error: Content is protected !!