Monday, June 8, 2026
spot_imgspot_img
spot_imgspot_img

ಮಂಗಳೂರು ನಗರ ಪೊಲೀಸರು ಹರಿಸಲಿದ್ದಾರೆ ಗಾನಸುಧೆ!

- Advertisement -
- Advertisement -

ಪೊಲೀಸರೆಂದರೆ ನಮ್ಮ ಕಣ್ಣಮುಂದೆ ಬರುವುದು ಹೊಡೆಬಡಿ ದೃಶ್ಯಗಳು. ಕೋವಿಡ್ ಲಾಕ್ ಡೌನ್ ಶುರುವಾದ ಮೇಲಂತು ಪ್ರತಿಯೊಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ತರದ ದೃಶ್ಯಗಳೇ ಕಾಣಸಿಗುತ್ತಿವೆ.

https://www.facebook.com/arvindviveksinger/videos/502077124425704/

ಆದರೆ ಇವೆಲ್ಲವನ್ನೂ ಮೀರಿದ ಜೀವನವೊಂದು ಪೊಲೀಸರಿಗಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ತಮ್ಮ ವೈಯಕ್ತಿಕ ಜೀವನದ ಎಲ್ಲಾ ಸುಖಗಳನ್ನು ಬದಿಗಿಟ್ಟು ರಾತ್ರಿ ಹಗಲು ನಮ್ಮೊಳಗೆ ಬೆರೆತುಹೋಗಬೇಕಿದೆ. ಅವರಿಗೂ ಸಂಸಾರವಿದ್ದು, ಅವರ ಮನೆಗಳಲ್ಲೂ ಪುಟ್ಟ ಕಂದಮ್ಮಗಳಿದ್ದಾರೆ, ತಂದೆತಾಯಿಯರಿದ್ದಾರೆ. ಅವರಲ್ಲೂ ಕಲಾಗಾರರಿದ್ದಾರೆ, ವೇದಿಕೆಯೇರಿದರೆ ಎಂತವರನ್ನೂ ಮಂತ್ರಮುಗ್ದರನ್ನಾಗಿಸುವ ಗಾನಪ್ರತಿಭೆಗಳಿದ್ದಾರೆ.

https://www.facebook.com/arvindviveksinger/videos/502077124425704/

ದಿನಾಂಕ: 01.06.2021 ಮಂಗಳವಾರದಂದು ಮಧ್ಯಾಹ್ನ 2 ಗಂಟೆಗೆ ರಂಜಿಸಲು ಬರುತ್ತಿದ್ದಾರೆ ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು. ಒಂದಷ್ಟು ಹಾಡುಗಳು ಒಂದಷ್ಟು ಮನರಂಜನೆ ರಾತ್ರಿಹಗಲೆನ್ನದೇ ತಮ್ಮ ಜೀವವನ್ನೂ ಲೆಕ್ಕಿಸದೇ ನಮ್ಮೆಲ್ಲರ ಜೀವವನ್ನುಳಿಸುವ ಕೆಲಸದಲ್ಲಿ ನಿರತರಾಗಿರುವ ಕರ್ನಾಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಈ ಕಾರ್ಯಕ್ರಮವನ್ನು ಅರ್ಪಿಸಲಿದ್ದಾರೆ.

- Advertisement -

Related news

error: Content is protected !!