- Advertisement -
- Advertisement -
ವಿಟ್ಲ: ಹಲವು ಶತಮಾನದ ಇತಿಹಾಸವಿರುವ ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಪರಂಪರೆಯಲ್ಲಿ ಖ್ಯಾತಿ ಪಡೆದಿರುವ ಮರ್ಹೂಂ ಅಲ್ ಹಾಜ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ಪುತ್ರ ವಿಟ್ಲದ ಮೇಗಿನಪೇಟೆ ನಿವಾಸಿ, ವಿ.ಎಂ. ಮಹಮೂದ್ ಮುಸ್ಲಿಯಾರ್ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ 12 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದರು. ವಿದ್ವತ್ ಕುಟುಂಬದ ಪರಂಪರೆಯ ಸಾತ್ವಿಕತೆ, ನಿರ್ಮಲ ಹೃದಯ, ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರಿಗೆ ಪತ್ನಿ, ಐದು ಗಂಡು ಮತ್ತು ಐದು ಹೆಣ್ಣು ಮಕ್ಕಳು ಇದ್ದಾರೆ.
- Advertisement -