




ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವವು ಡಿಸೆಂಬರ್ 26-12-2025ನೇ ಶುಕ್ರವಾರದಿಂದ 27-12-2025ನೇ ಶನಿವಾರದವರೆಗೆ ನಡೆಯಲಿದೆ.
ದಿನಾಂಕ: 16-12-2025ನೇ ಮಂಗಳವಾರದಿಂದ ದಿನಾಂಕ: 15-12-2025ನೇ ಗುರುವಾರದವರೆಗೆ ಪ್ರತಿ ದಿನ ಬೆಳಿಗ್ಗೆ 5:00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನು ಪೂಜೆ ನಡೆಯಲಿದೆ.
ದಿನಾಂಕ: 19-12-2025ನೇ ಶುಕ್ರವಾರ ಚಪ್ಪರ ಮುಹೂರ್ತ ನಡೆಯಲಿದೆ.
ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ಉತ್ಸವದ ಪ್ರಯುಕ್ತ ದಿನಾಂಕ: 25-12-2025ನೇ ಗುರುವಾರ ಸಾಯಂಕಾಲ 4:00ಕ್ಕೆ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ಮತ್ತು ಬೆಳ್ಳಿಪ್ಪಾಡಿ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಿಂದ ಶ್ರೀ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಹೊರಡಲಿರುವುದು.

ದಿನಾಂಕ: 26-12-2025ನೇ ಶುಕ್ರವಾರ ಬೆಳಿಗ್ಗೆ 9:00ಕ್ಕೆ ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:00 ರಿಂದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿಗಳವರ ನೇತೃತ್ವದಲ್ಲಿ ರಂಗಪೂಜೆ ಹಾಗೂ ಕಿರಿಷಷ್ಠಿ ಉತ್ಸವ ಮತ್ತು ಕಟ್ಟೆ ಪೂಜೆ , ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10:00ರಿಂದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ನಿಗೂಢ ಕಥಾಹಂದರದ “ಓಲು ತತ್ತ್ಂಡ್” ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಲಿದೆ.
ದಿನಾಂಕ: 27-12-2025ನೇ ಶನಿವಾರ ಬೆಳಿಗ್ಗೆ 9:00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ಕೂಟೇಲಿನಿಂದ ಭಂಡಾರ ಬಂದು ಹುಲಿಚಾಮುಂಡಿ ನೇಮ ನಡೆಯಲಿದೆ.









