- Advertisement -
- Advertisement -
ಪುತ್ತೂರು :-ಕಾಡಿನಿಂದ ನಾಡಿಗೆ ಆಗಮಿಸಿದ ಜಿಂಕೆಯೊಂದು ಬಾವಿಗೆ ಬಿದ್ದ ಘಟನೆ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ಗುರುವಾರದಂದು ನಡೆದಿದೆ.ಮಾಡನ್ನೂರು ಗ್ರಾಮದ ಕಾವು ಮದ್ಲ ಸಮೀಪ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಬಾವಿಯೊಂದಕ್ಕೆ ಅಕಸ್ಮಾತ್ತಾಗಿ ಜಿಂಕೆ ಬಿದ್ದಿದೆ.
ಮಳೆಗಾಲವಾದುದರಿಂದ ಬಾವಿಯಲ್ಲಿ ನೀರು ತುಂಬಿದ್ದು, ಜಿಂಕೆ ನೀರಿನಲ್ಲಿ ಒದ್ದಾಡುತ್ತಿತ್ತು. ವಿಷಯ ತಿಳಿದ ಮನೆಯವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಜಿಂಕೆಯನ್ನು ಮೇಲಕ್ಕೆತ್ತಿದ್ದಾರೆ.
- Advertisement -