- Advertisement -
- Advertisement -




ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ ವಿದ್ಯಾರ್ಥಿನಿ 7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಾಲಕಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.
ಪೊಲೀಸರ ಮಾಹಿತಿ ಪ್ರಕಾರ, ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ (JEE) ಪಾಸಾಗಲು ಸಾಧ್ಯವಾಗದೇ ಇದ್ದಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಡೆತ್‌ನೋಟ್ ಬರೆದಿಟ್ಟಿದ್ದು, ತನ್ನನ್ನು ಕ್ಷಮಿಸುವಂತೆ ಪೋಷಕರಲ್ಲಿ ಕೇಳಿಕೊಂಡಿದ್ದಾಳೆ. ನನ್ನನ್ನು ಕ್ಷಮಿಸಿ, ನನ್ನಿಂದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಅಧ್ಯಯನದ ಒತ್ತಡ ಹಾಗೂ ಅಂದುಕೊಂಡ ರೀತಿಯಲ್ಲಿ ಓದಲು ಸಾಧ್ಯವಾಗಲಿಲ್ಲವೆಂದು ಬರೆದಿದ್ದಾಳೆ ಎಂದು ವರದಿಯಾಗಿದೆ.
- Advertisement -