Wednesday, April 23, 2025
spot_imgspot_img
spot_imgspot_img

ದೆಹಲಿ ವಿಧಾನಸಭೆ: ವಿರೋಧ ಪಕ್ಷದ ನಾಯಕಿಯಾಗಿ ಮಾಜಿ ಸಿಎಂ ಆತಿಶಿ ಆಯ್ಕೆ

- Advertisement -
- Advertisement -

ನವದೆಹಲಿ: ದೆಹಲಿ ವಿಧಾನಸಭೆಗೆ ಮಾಜಿ ಸಿಎಂ ಆತಿಶಿ ಅವರನ್ನು ವಿರೋಧ ಪಕ್ಷದ ನಾಯಕಿಯನ್ನಾಗಿ ಎಎಪಿಯ ಶಾಸಕರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಪಕ್ಷದ 22 ಶಾಸಕರು ಇಂದು ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಅವರನ್ನು ಆರಿಸಲಾಗಿದೆ.

ಫೆ.24ರಿಂದ ದೆಹಲಿ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ಈ 3 ದಿನಗಳ ಅಧಿವೇಶನದಲ್ಲಿ, ಆಡಳಿತರೂಢ ಬಿಜೆಪಿಯು ಹಿಂದಿನ ಎಎಪಿ ಸರ್ಕಾರದ ಸಾಧನೆಯ ಕುರಿತ ಸಿಎಜಿ ವರದಿಯನ್ನು ಮಂಡಿಸುವುದಾಗಿ ತಿಳಿಸಿದೆ.

- Advertisement -

Related news

error: Content is protected !!