Friday, March 21, 2025
spot_imgspot_img
spot_imgspot_img

ದೆಹಲಿ: ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ..!

- Advertisement -
- Advertisement -

ನವದೆಹಲಿ: ಹಲಿ ಮತ್ತು ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಪೂರ್ವ ದೆಹಲಿಯ ಅಲ್ಕಾನ್ ಶಾಲೆಗೆ ಮತ್ತು ನೋಯ್ಡಾದ ಶಿವ ನಾಡರ್ ಶಾಲೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಅಲ್ಕಾನ್ ಶಾಲೆಗೆ ಬಂದ ಬೆದರಿಕೆ ಸಂಬಂಧ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯದಳ ಕೂಡ ಸ್ಥಳದಲ್ಲಿ ಇದ್ದು, ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತೆ ಆದೇಶಿಸಿದೆ.

ಇದೇ ರೀತಿಯ ಬೆದರಿಕೆ ಕರೆ 6 ಫೆಬ್ರವರಿ 2025ರಂದು ನೋಯ್ಡಾದ ಸ್ಟೆಪ್ ಬೈ ಸ್ಟೆಪ್ ಸ್ಕೂಲ್, ದಿ ಹೆರಿಟೇಜ್ ಸ್ಕೂಲ್, ಜ್ಞಾನಶ್ರೀ ಸ್ಕೂಲ್ ಮತ್ತು ಮಯೂರ್ ಸ್ಕೂಲ್‌ಗಳಿಗೆವೂ ಬಂದಿದ್ದವು. ಎಲ್ಲಾ ಸ್ಥಳಗಳನ್ನು ಪೊಲೀಸರು, ಬಾಂಬ್ ಸ್ಕ್ವಾಡ್, ಅಗ್ನಿಶಾಮಕ ದಳ ಮತ್ತು ಶ್ವಾನ ದಳ ತಕ್ಷಣವೇ ಪರಿಶೀಲಿಸಿದರು. ತನಿಖೆ ಸಂದರ್ಭದಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಲಿಲ್ಲ ಎಂದು ತಿಳಿದು ಬಂದಿದೆ. ಇದೊಂದು ಹುಸಿ ಬೆದರಿಕೆ ಎಂದು ಅಂದಾಜಿಸಲಾಗಿದೆ.

- Advertisement -

Related news

error: Content is protected !!