Thursday, May 9, 2024
spot_imgspot_img
spot_imgspot_img

ಮಂಗಳೂರು: ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿ ಬಳಿ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ‌ ಮಹಿಳಾ ಅಧಿಕಾರಿ

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg
This image has an empty alt attribute; its file name is ad-2-2.jpg

ಮಂಗಳೂರು: ಬಿಲ್‌ ಪಾವತಿಗೆ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಮಹಿಳಾ ಅಧಿಕಾರಿ ಮಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮ್ಮ ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಪರಮೇಶ್.ಎನ್.ಪಿ ಅವರು ಆಗಸ್ಟ್ ನಲ್ಲಿ ನಿವೃತ್ತಿ ಹೊಂದಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ, ಬಂಟ್ವಾಳ ತಾಲೂಕು ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪಪಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮಗಳ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ವಿವಿಧ ಜಾತಿಯ 50 ಲಕ್ಷದ ಮೌಲ್ಯದ ಸಸಿ ವಿತರಣೆ ಮಾಡಿದ್ದರು.

ನರ್ಸರಿ ಮಾಲೀಕರಿಂದ ಅರಣ್ಯ ಇಲಾಖೆ 50 ಲಕ್ಷ ರೂ. ಸಸಿ ಖರೀದಿಸಿದ್ದು, 32 ಲಕ್ಷ ರೂ. ಬಾಕಿ ಉಳಿಸಿಕೊಂಡಿತ್ತು. ಈ ಬಾಕಿ ಮೊತ್ತವನ್ನು ರಿಲೀಸ್‌ ಮಾಡುವಂತೆ ಪರಮೇಶ್‌ ಹೇಳಿದಾಗ ಭಾರತಮ್ಮ 1ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. “ಬಿಲ್ ಮೊತ್ತದ 18% ಹಣವನ್ನು ಮುಂಗಡವಾಗಿ ತನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೆ ತಾನು ಬಿಲ್ ಪಾವತಿ ಮಾಡುವುದಿಲ್ಲ” ಎಂದು ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಇಂದು ಭಾರತಮ್ಮ ರವರು ದೂರುದಾರಿಂದ 1ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿತರನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳೂರು ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ , ಡಿವೈಎಸ್ಪಿ ಶ್ರೀಮತಿ ಕಲಾವತಿ,ಕೆ, ಡಿವೈಎಸ್ಪಿ ಚಲುವರಾಜು,ಹಾಗೂ ಇನ್ಸ್ಪೆಕ್ಟರ್ ಸುರೇಶ್, ಕುಮಾರ್‌.ಪಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!