Monday, May 6, 2024
spot_imgspot_img
spot_imgspot_img

ಮದುವೆ ಮಂಟಪದಲ್ಲಿ ವರನಿಂದ ವರದಕ್ಷಿಣೆಗೆ ಡಿಮ್ಯಾಂಡ್; ಸರ್ಕಾರಿ ನೌಕರ ಪೊಲೀಸ್ ವಶ..!

- Advertisement -G L Acharya panikkar
- Advertisement -

ಸರ್ಕಾರಿ ನೌಕರನೋರ್ವ ತಾಳಿ ಕಟ್ಟುವ ಸಮಯದಲ್ಲಿ ‌ವರದಕ್ಷಿಣೆ ಡಿಮ್ಯಾಂಡ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್ ಎಂದು ಗುರುತಿಸಲಾಗಿದೆ.

ಇತ ಸರ್ಕಾರಿ ನೌಕರನಾಗಿದ್ದು, ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್​.ಡಿ.ಎ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಆದರೆ ಮದುವೆ ದಿನ 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆಗೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಈತನ ಬೇಡಿಕೆಯಿಂದಾಗಿ ಮದುವೆ ಸ್ಥಗಿತವಾಗಿದೆ.ವರನ ವರದಕ್ಷಿಣೆ ಆಸೆಗೆ ಮದುವೆ ಮುರಿದು ಬಿದ್ದಿದ್ದು, ಆತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ವರ ಸಚಿನ್ ಪಾಟೀಲ್ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ,‌ ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ನಡೆದಿತ್ತು. ಮದುವೆ ದಿನದಂದು 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ನೀಡಲು ಬೇಡಿಕೆ ಇಟ್ಟಿದ್ದಾನೆ. ‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಮದುವೆ ಆಗಲ್ಲ ಎಂದು ವರ ಹೇಳಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಪೊಲೀಸ್​ ಠಾಣೆಯಲ್ಲಿ ವಧುವಿನಿಂದ ವರನ ವಿರುದ್ಧ ದೂರು ದಾಖಲಾಗಿದೆ. ವಧುವಿನ ದೂರಿನ ಅನ್ವಯ ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!