


ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು , ಕಳೆದ 24 ಗಂಟೆಯಲ್ಲಿ 293 ಜನರಿಗೆ ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 7,840ಕ್ಕೆ ಏರಿಕೆ ಆಗಿದೆ.
24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 7 ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿವೆ. ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7840ಕ್ಕೆ ಏರಿಕೆ ಆಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.
ಮಳೆಗಾಲದಲ್ಲೇ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಹೀಗಾಗಿ ನೀರು ನಿಲ್ಲದಂತೆ ಸ್ವಚ್ಛತೆಗೆ ಆದ್ಯತೆ, ಸೊಳ್ಳೆಗಳ ನಾಶಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ 10 ಪ್ರತ್ಯೇಕ ಡೆಂಗ್ಯೂ ವಾರ್ಡ್ ತೆರೆಯಬೇಕು. ಡೆಂಗ್ಯೂ ಕಂಟ್ರೋಲ್ಗೆ ಟಾಸ್ಕ್ಫೋರ್ಸ್ ರಚನೆ ಮಾಡಬೇಕು. ಕೊಳಗೇರಿ ಪ್ರದೇಶದಲ್ಲೇ ಹೆಚ್ಚು ಡೆಂಗ್ಯೂ ವ್ಯಾಪಿಸಿದೆ. ಹೀಗಾಗಿ ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ಕಂಟ್ರೋಲ್ಗೆ ಟಾಸ್ಕ್ ಫೋರ್ಸ್
ಡೆಂಗ್ಯೂ ಕ್ರೌರ್ಯ ಸರ್ಕಾರವನ್ನೂ ನಡುಗುವಂತೆ ಮಾಡಿದೆ. ಐಎಎಸ್ ಅಧಿಕಾರಿಗಳಿಗೆ ಬಿಸಿ ತಾಕಿಸಿದ್ದ ಸಿಎಂ, ನಿನ್ನೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.