Saturday, April 20, 2024
spot_imgspot_img
spot_imgspot_img

ಪ್ರಧಾನ ಮಂತ್ರಿ ನರೇಂದ್ರ ಮೋದಿ  ವೆಬ್ ಸೈಟ್ ನ ಟ್ವಿಟ್ಟರ್ ಖಾತೆ ಹ್ಯಾಕ್ !

- Advertisement -G L Acharya panikkar
- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್ ವೆಬ್​ಸೈಟ್ ಹ್ಯಾಕ್ ಆಗಿದ್ದನ್ನು ಟ್ವಿಟರ್ ದೃಢೀಕರಿಸಿದೆ. ಗುರುವಾರ ಮುಂಜಾನೆ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು, ಸದ್ಯ ಸರಿಪಡಿಸಲಾಗಿದೆ.

ಅವರ ವೆಬ್​ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಅದರ ಟ್ವಿಟರ್ ಅಕೌಂಟ್ ಮೂಲಕ ಫಾಲೋಯರ್ಸ್ ಬಳಿ ರಿಲೀಫ್ ಫಂಡ್​ಗೆ ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ನೀಡಿ ಎಂಬ ಸರಣಿ ಟ್ವೀಟ್​ಗಳನ್ನು ಅಪ್ಡೇಟ್ ಮಾಡಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ. ಸುಮಾರು 2.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.

ಜುಲೈ ತಿಂಗಳಲ್ಲಿ ಅನೇಕ ಗಣ್ಯರ ಟ್ವಿಟರ್​ ಖಾತೆಗಳು ಹ್ಯಾಕ್ ಆಗಿದ್ದವು. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯೂ ಒಂದು. ಸದ್ಯ ಟ್ವಿಟರ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ. ಹೊಸದಾಗಿ ಯಾವುದೇ ಟ್ವಿಟರ್​ ಖಾತೆಗಳು ಹ್ಯಾಕ್ ಆಗಿಲ್ಲ ಎಂದು ಟ್ವಿಟರ್ ತಿಳಿಸಿದ್ದಾಗಿ ವರದಿಯಲ್ಲಿದೆ.

- Advertisement -

Related news

error: Content is protected !!