Saturday, June 28, 2025
spot_imgspot_img
spot_imgspot_img

ಮಹಾರಾಷ್ಟ್ರ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್‌

- Advertisement -
- Advertisement -

ಮುಂಬೈ: ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ಹಾಗೂ ಅಜಿತ್ ಪವಾರ್ ಬಣದ ಶಾಸಕ ನರಹರಿ ಜಿರ್ವಾಲ್ ಜೊತೆಗೆ 7 ಮಂದಿ ಶಾಸಕರು ಇಂದು ಸಚಿವಾಲಯದ 3ನೇ ಮಹಡಿಯಿಂದ ಹಾರಿದ್ದು, ಕೆಳಗೆ ನೆಟ್ ಅಳವಡಿಸಿದ್ದರಿಂದ ಅವರೆಲ್ಲಾ ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಧನಗರ್ ಸಮುದಾಯಕ್ಕೆ ಮೀಸಲಾತಿ ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದನ್ನು ವಿರೋಧಿಸಿ ಆಡಳಿತ ಮತ್ತು ಪ್ರತಿಪಕ್ಷದ 7-8 ಮಂದಿ ಶಾಸಕರು ಮೂರನೇ ಮಹಡಿಯಿಂದ ಹಾರಿ ಪ್ರತಿಭಟಿಸಿದ್ದಾರೆ. ಈ ನಾಯಕರು ನೇರವಾಗಿ ಅಳವಡಿಸಲಾಗಿದ್ದ ಬಲೆಗೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಶಾಸಕರು ನೆಟ್ ಹಾರಿರುವ ದೃಶ್ಯ ಹಾಗೂ ನೆಟ್‌ನಲ್ಲಿ ಸಿಲುಕಿದ್ದ ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅವರಲ್ಲಿ ಬುಡಕಟ್ಟು ಶಾಸಕರೂ ಇದ್ದು, ಎಲ್ಲ ಶಾಸಕರು ನೆಟ್‌ನಲ್ಲಿಯೇ ನಿಂತು ಘೋಷಣೆಗಳನ್ನು ಕೂಗುತ್ತಿದ್ದರು.

- Advertisement -

Related news

error: Content is protected !!