Friday, April 26, 2024
spot_imgspot_img
spot_imgspot_img

ಎಷ್ಟೇ ದೊಡ್ಡವರಾದರೂ ಕಾನೂನಿನ ಮುಂದೆ ಡ್ರಗ್ಸ್​ ಸ್ಮಗ್ಲರ್​ಗಳು ಅಷ್ಟೆ: ಡಿಜಿಪಿ ಪ್ರವೀಣ್ ಸೂದ್

- Advertisement -G L Acharya panikkar
- Advertisement -

ಮಂಗಳೂರು: ಕಾನೂನಿನ ಎದುರು ಎಲ್ಲರೂ ಸಮಾನರು.ಯಾರೂ ಉನ್ನತ ವ್ಯಕ್ತಿಗಳಲ್ಲ.ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮಗೆ ಅವರು ಡ್ರಗ್ಸ್ ಸ್ಮಗ್ಲರ್​ಗಳು ಅಷ್ಟೇ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಪಿಗಳು ಡ್ರಗ್ಸ್ ಸಾಗಾಟಗಾರರೆಂದು ತಿಳಿದು ಬಂದರೆ ಕಾನೂನು ಪ್ರಕಾರ ಬಂಧನ ಖಂಡಿತಾ ಆಗುತ್ತದೆ. ಆ ಬಳಿಕ ತನಿಖೆ ನಡೆಯುತ್ತದೆ. ಅವರ ಮೇಲೆ ಜಾಮೀನು ಸಿಗದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.ಮಾದಕ ವಸ್ತುಗಳು ಅಂತಾರಾಷ್ಟ್ರೀಯವಾಗಿ ವಿಮಾನಗಳ ಮೂಲಕವೂ ಬರುವುದು, ಮಾದಕ ವಸ್ತು ಸಾಗಾಟಗಾರರು ಸೈಬರ್‌ ಅಪರಾಧಗಳಲ್ಲಿಯೂ ತೊಡಗಿಕೊಂಡಿ ರುವುದು ಮೊದಲಾದ ವಿಚಾರಗಳು ತಿಳಿದಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜತೆಗೂ ಕೈ ಜೋಡಿಸುತ್ತಿದ್ದೇವೆ ಎಂದರು.

ಆದರೆ ಈಗ ಆಗಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಾಗಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡ್ತೇವೆ ಎಂದು ಪ್ರವೀಣ್ ಸೂದ್ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಚಾಕಲೇಟ್ ಡ್ರಿಂಕ್ಸ್ ಗಳಲ್ಲೂ ಡ್ರಗ್ಸ್ ಮಿಕ್ಸ್ ಮಾಡಿ ಕೊಡ್ತಾರೆ ಎಂಬ ಮಾಹಿತಿ ಇಲಾಖೆಗೆ ಲಭಿಸಿದೆ. ಆದರೆ, ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ – ಎಸ್.ಪಿ.ಗೆ ಸೂಚನೆ ನೀಡಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ಫಲಿತಾಂಶ ತೋರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಹೇಳಿದರು.

ಡ್ರಗ್ಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಬಹಳಷ್ಟು ಕಾಲದಿಂದ ಹೇಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಕಾರ್ಯಚಟುವಟಿಕೆಗಳನ್ನು ನಡೆಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಹಳಷ್ಟು ಜನರನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಮಂದಿಯ ಬಂಧನದ ಸಾಧ್ಯತೆ ಇದೆ. ಹಿಂದೆ ಡ್ರಗ್ಸ್ ಸೇವನೆ ಮಾಡುವವರು ಮಾತ್ರ ಸಿಕ್ಕಿ ಬೀಳುತ್ತಿದ್ದರು. ಇದೀಗ ಡ್ರಗ್ಸ್ ಸಾಗಾಟಗಾರರ ಜಾಲವೇ ಸಿಕ್ಕಿಬಿದ್ದಿದೆ‌ ಎಂದು ಪ್ರವೀಣ್ ಸೂದ್ ಹೇಳಿದರು.

- Advertisement -

Related news

error: Content is protected !!