Monday, April 29, 2024
spot_imgspot_img
spot_imgspot_img

ವೀರಕಂಬ: ಧನಂಜಯ ಪಾದೆ ಬೂತ್‌ 206 ರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ…!

- Advertisement -G L Acharya panikkar
- Advertisement -

ವೀರಕಂಬ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಂಗಿಲಪದವು ಬೂತ್‌ 206 ರ ಅಧ್ಯಕ್ಷ ಬಿಜೆಪಿ ಕಾರ್ಯಕರ್ತ ಧನಂಜಯ ಪಾದೆ ಇವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬೂತ್‌ ಸಂಖ್ಯೆ 206ರ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷವನ್ನು ಬಲಿಷ್ಠವನ್ನಾಗಿಸುವಲ್ಲಿ ಶ್ರಮ ವಹಿಸಿದವರು. ಪತ್ರಿಕೋದ್ಯಮದಲ್ಲಿ ಪದವೀಧರರಾಗಿರುವ ಧನಂಜಯ ಅವರು ಉತ್ತಮ ವಾಕ್‌ ಚಾತುರ್ಯ ಹೊಂದಿದವರು.

ಕಳೆದ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೇಸಿನ ಭದ್ರಕೋಟೆಯಾದ ಮಂಗಿಲಪದವು ಪರಿಸರದಲ್ಲಿ ಸರಿಸುಮಾರು 40 ಮತಗಳ ಅಂತರದಲ್ಲಿ ವಿರೋಚಿತ ಸೋಲನ್ನು ಪಡೆದುಕೊಂಡರೂ ಮತ್ತೆ ಅದೇ ಪರಿಸರದಲ್ಲಿ ದೇವಿಪ್ರಸಾದ್‌ ಶೆಟ್ಟಿ ಮತ್ತು ಧನಂಜಯ ಪಾದೆ ಇವರುಗಳ ನೇತೃತ್ವದಲ್ಲಿ ಬಿಜೆಪಿ ಪಕ್ಷಬಲವರ್ಧನೆ ಮಾಡಿ, ಹಿಂದೂ ಜಾಗರಣ ವೇದಿಕೆ ಎಂಬ ಸಂಘಟನಾ ಶಕ್ತಿಯನ್ನು ಕಟ್ಟಿಬೆಳೆಸಿದ ಯುವ ನಾಯಕ ಧನಂಜಯ ಪಾದೆ.

2021 ರಲ್ಲಿ ರಾಜ್ಯಾದ್ಯಂತ ಹೊತ್ತಿ ಉರಿದ ಹಲಾಲ್‌ ವರ್ಸಸ್‌ ಜಡ್ಕಾ, ಹಿಜಾಜ್ ಗಲಭೆ ಸಂದರ್ಭದಲ್ಲಿ ಜಡ್ಕಾ ಮಾಂಸದಂಗಡಿಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದವರಲ್ಲಿ ಧನಂಜಯ ಪಾದೆ ಒಬ್ಬರು. ಹಲವು ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಗಳ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ ಧನಂಜಯ ಪಾದೆಯವರು ಇದೀಗ ಬೂತ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಧನಂಜಯರವರು ’ನಾನು ವೈಯಕ್ತಿಕ ಕಾರಣಗಳಿಂದ ವೀರಕಂಭ ಗ್ರಾಮದ ಮಂಗಿಲಪದವು ಬೂತ್‌ 206 ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

- Advertisement -

Related news

error: Content is protected !!