Thursday, June 24, 2021
spot_imgspot_img
spot_imgspot_img

ಬಿಡುಗಡೆಗೆ ಸಿದ್ದವಾಗುತ್ತಿದೆ ಧರ್ಮದೈವ ಕಿರುಚಿತ್ರ!

- Advertisement -
- Advertisement -

ಧರ್ಮ ದೈವ ಕಿರು ಚಿತ್ರದ ಕೇಂದ್ರ ಬಿಂದು ರಮೇಶ್ ರೈ ಕುಕ್ಕುವಳ್ಳಿ ತುಳುನಾಡಿನ ಕಾರ್ಣಿಕದ ಶಕ್ತಿ ದೈವಗಳ ಕಾರ್ಣಿಕವನ್ನು ತೋರಿಸುವ ಕಥೆ ಹೊಂದಿರುವ ಕಿರುಚಿತ್ರ. ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೆಶನ್ಸ್ ಅಡಿಯಲ್ಲಿ ನಿರ್ಮಿಸಿರುವ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ, ಹಮೀದ್ ಪುತ್ತೂರು ಅವರ ಚಿತ್ರಕಥೆ -ಸಹ ನಿರ್ದೇಶನದ ಧರ್ಮ ದೈವ ಕಿರುಚಿತ್ರ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಚಿತ್ರದ ಕೇಂದ್ರ ಬಿಂದು ನಟ ರಮೇಶ್ ರೈ ಕುಕ್ಕುವಳ್ಳಿ ತನ್ನ ಅದ್ಭುತ ನಟನೆಯ ಮೂಲಕ ಈ ಕಿರು ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದಾರೆ.

ರಮೇಶ್ ರೈ ಕುಕ್ಕುವಳ್ಳಿ ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಪಾತ್ರಗಳನ್ನ ಮಾಡಿರುವ ರಮೇಶ್ ರೈ ಕುಕ್ಕುವಳ್ಳಿ ಅವರಿಗೆ ಧರ್ಮ ದೈವದ ಯಜಮಾನನ ಪಾತ್ರ ಅವರ ವೃತ್ತಿ ಜೀವನದಲ್ಲಿ ಸದಾ ನೆನಪಿಡುವ ಪಾತ್ರವಾಗಲಿದೆ ಎಂದು ಚಿತ್ರ ತಂಡದ ಬಲವಾದ ನಂಬಿಕೆ. ತನ್ನ ಭಾವನೆ, ಭಯದ ಮೂಲಕ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ನಿರ್ದೇಶಕರು ಈ ಕಥೆಯನ್ನು ಬರೆಯುವಾಗಲೇ ಈ ಪಾತ್ರಕ್ಕೆ ರಮೇಶ್ ರೈ ಅವರೇ ಅತ್ಯಂತ ಸೂಕ್ತ ನಟ ಎಂದು ನಿರ್ಣಯಿಸಿದ್ದರಂತೆ. ಚಿತ್ರದ ಇತರ ಪಾತ್ರ ವರ್ಗದಲ್ಲಿ ಸುಂದರ್ ರೈ ಮಂದಾರ, ದೀಕ್ಷಾ ಡಿ ರೈ, ಚಿತ್ತರಂಜನ್ ಶೆಟ್ಟಿ ನುಳಿಯಾಲು, ಕೌಶಿಕ್ ತೋಟ, ವಸಂತ ಲಕ್ಷ್ಮಿ, ನಿತೇಶ್ ಮುಂತಾದವರು ನಟಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಕ್ಯಾಮರಾ ಕೆಲಸ ಹರೀಶ್ ಪುತ್ತೂರು, ಸಂಕಲನ -ರಾಧೆಶ್ ರೈ ಮೋಡಪ್ಪಾಡಿ, ಪ್ರಸಾದನ ಪ್ರೇಮ್ ಆರ್ಲಪದವು, ಗ್ರಾಫಿಕ್ಸ್ -ಧನು ರೈ, ನಿತಿನ್ ಕಾನಾವು , ಸಂಭಾಷಣೆ ಹಮೀದ್ ಪುತ್ತೂರು ಮತ್ತು ನಾರಾಯಣ ರೈ ಕುಕ್ಕುವಳ್ಳಿ, ಸ್ಥಿರ ಚಿತ್ರ -ಪ್ರಣವ ಭಟ್ ಹಾಗೂ ಹಿನ್ನೆಲೆ ಧ್ವನಿ : ಭಾಸ್ಕರ್ ರೈ ಕುಕ್ಕುವಳ್ಳಿ ಹಾಗೂ ಅಶ್ವಿನಿ ಪೆರುವಾಯಿ ಅವರು ಕೆಲಸ ಮಾಡಿದ್ದಾರೆ. ಲಾಕ್ ಡೌನ್ ಮುಗಿದ ನಂತರ ಈ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಚಿತ್ರ ತಂಡಕ್ಕಿದೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!