Friday, April 26, 2024
spot_imgspot_img
spot_imgspot_img

9 ಮಕ್ಕಳಿಗೆ ಜನ್ಮ ನೀಡಿರುವ ಮಹಾತಾಯಿ ಈಕೆ!

- Advertisement -G L Acharya panikkar
- Advertisement -

ಮಾಲಿ: ಮಾಲಿ ದೇಶದ ಮಹಿಳೆಯೊಬ್ಬರು ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಮಂಗಳವಾರ ನಡೆದಿದೆ. ಈ ಬಗ್ಗೆ ಮಾಲಿ ಸರ್ಕಾರ ಕೂಡ ಖಚಿತಪಡಿಸಿದ್ದು, ಎಲ್ಲಾ ಮಕ್ಕಳೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

9 ಮಕ್ಕಳಿಗೆ ಜನ್ಮ ನೀಡಿರುವ ಈ ಮಹಾತಾಯಿಯ ಹೆಸರು ಹಲೀಮಾ ಸಿಸ್ಸೆ (25). ಹಲೀಮಾ ಸಿಸ್ಸೆ ಗರ್ಭಿಣಿಯಾಗಿದ್ದಾಗ ವೈದ್ಯರು 7 ಶಿಶುಗಳು ಹೊಟ್ಟೆಯಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ ಹೆರಿಗೆ ಆದ ನಂತರ 9 ಮಕ್ಕಳು ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

“ನವಜಾತ ಶಿಶುಗಳು (ಐದು ಹೆಣ್ಣು ಮತ್ತು ನಾಲ್ಕು ಗಂಡು) ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಎಲ್ಲಾ ಮಕ್ಕಳನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ ಎಂದು ಮಾಲಿಯ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!