





ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನದ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಡಿ. 22 ನೇ ಆದಿತ್ಯವಾರ ನಡೆಯಿತು. ಸಂಜೆ ವಿದುಷಿ ಶ್ರೀಮತಿ ಅನುರಾಧ ಅಡ್ಕಸ್ಥಳ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮೂಡಿಬಂತು.

ಬಳಿಕ ಬಂಗಾರು ಅರಸರು ವಿಟ್ಲ ಅರಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಇವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು, ದಿವಾಕರ ದಾಸ್ ನೇರ್ಲಾಜೆ ಆಡಳಿತ ನಿರ್ದೇಶಕರು ಎಸ್.ಎಲ್.ವಿ ಗ್ರೂಪ್ಸ್ ಮೈಸೂರು, ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು, ದಿನೇಶ್ ಮಾಡ್ತೇಲು ಆಕೃತಿ ಕನ್ಟ್ರಕ್ಷನ್ ಕಂಬಳಬೆಟ್ಟು, ಸದಾಶಿವ ಆಚಾರ್ಯ ಕೈಂತಿಲ, ಶ್ರವಣ ಜ್ಯುವೆಲ್ಲರಿ ವಿಟ್ಲ, ಜಗದೀಶ್ ಪೂಜಾರಿ ಅಧ್ಯಕ್ಷರು ಶ್ರೀ ಶಾರದಾಂಬ ಭಜನಾ ಮಂಡಳಿ ಅಳಕೆಮಜಲು, ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಮಾಜಿ ಉಪಾಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್, ವಿಶ್ವನಾಥ ಅಮೈ, ಅಧ್ಯಕ್ಷರು ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ, ಪಂಜಿಗುಡ್ಡೆ ಈಶ್ವರ ಪ್ರಸಾದ್ ಪುತ್ತೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಇಂಡಿಯಾ ಸೋಶಿಯಲ್ ಕಲ್ಚರ್ & ಸೆಂಟರ್ ಅಬುದಾಬಿ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ, ಲೋಕೇಶ್ ಶೆಟ್ಟಿ ನವಚೇತನ ಚಿಟ್‌ಫಂಡ್, ಇವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಂತರ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ಮನಸ್ ಮೈದಾನ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.