Monday, September 7, 2026
spot_imgspot_img
spot_imgspot_img

ಧರ್ಮಸ್ಥಳ ಪ್ರಕರಣ : ಇಂದೂ ಮುಂದುವರಿಯಲಿದೆ ಅಗೆತ ಕಾರ್ಯಾಚರಣೆ

- Advertisement -
- Advertisement -

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದಂತೆ 8 ಅಡಿ ಅಗೆದರೂ ಶವವಾಗಲಿ, ಶವದ ಕುರುಹು ಆಗಲಿ ಸಿಕ್ಕಿಲ್ಲ. ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗವನ್ನು ದಿನಪೂರ್ತಿ ಅಗೆದರೂ ಏನೂ ಸಿಗದೆ ಇರುವುದರಿಂದ ಇನ್ನುಳಿದ ಜಾಗದ ಕಡೆ ಎಸ್‌ಐಟಿ ಗಮನ ಹರಿಸಿದೆ.

ಇಂದು ಮತ್ತೆ ಅಗೆತ ಮುಂದುವರಿಯಲಿದೆ.ಇನ್ನುಳಿದ 12 ಜಾಗಗಳನ್ನೂ ಅಗೆಯಲು ಎಸ್‌ಐಟಿ ನಿರ್ಧರಿಸಿದೆ. ಮೊದಲ ಜಾಗದಲ್ಲಿ ಏನೂ ಸಿಗದಿದ್ದರೂ ಮುಂದಿನ ಜಾಗದಲ್ಲಾದರೂ ಆತ ಹೂತಿಟ್ಟಿದ್ದಾನೆ ಎನ್ನುವ ಶವಗಳ ಯಾವುದಾದರು ಕುರುಹುಗಳು ಸಿಗಬಹುದು ಎಂದು ಎಸ್‌ಐಟಿ ಇಂದು ಮತ್ತೆ ಅಗೆಯುವ ಕೆಲಸಕ್ಕೆ ಮುಂದಾಗಿದೆ.

- Advertisement -

Related news

error: Content is protected !!